Site icon PowerTV

ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು

ಬೀದರ್ : ಕಲ್ಲು ಗಣಿಗಾರಿಕೆ ನಡೆದ ಜಾಗದಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಪತ್ನಾಪುರ ಗ್ರಾಮದಲ್ಲಿ ನಡೆದಿದೆ.

ಇಸ್ಮಾಯಿಲ್ (21), ಸಮೀರ್ (28) ಮೃತ ದುರ್ದೈವಿಗಳು. ಇಸ್ಮಾಯಿಲ್ ಕಲ್ಲು ಗಣಿಗಾರಿಕೆ ನಡೆದ ಜಾಗದಲ್ಲಿ ಈಜಲು ಹೋಗಿದ್ದ. ಆತ ಈಜು ಬಾರದೇ ನೀರಿಗೆ ಇಳಿದಿದ್ದ. ಹೀಗಾಗಿ, ಆತ ಮುಳುಗುತ್ತಿದ್ದಾಗ ಆತನನ್ನು ರಕ್ಷಿಸಲು ಹೋಗಿ ಸಮೀರ್ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಈ ಸಂಬಂಧ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಅಪಘಾತ : ಇಬ್ಬರಿಗೆ ಗಾಯ

ಟಾಟಾ ಏಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ್ ಬಳಿ ನಡೆದಿದೆ. ಗಾಯಾಳುಗಳನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಬೈಕ್ ಸವಾರರ ಮಾಹಿತಿ ಕಲೆ ಹಾಕುತ್ತಿದ್ದಾರೆ.

Exit mobile version