Site icon PowerTV

ಎರಡು ವರ್ಷ ಆದ್ಮೇಲೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ : ಶಾಸಕ ಶಿವಗಂಗಾ ಬಸವರಾಜ್

ದಾವಣಗೆರೆ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಐಟಿ ಗಾಳ ವಿಚಾರಕ್ಕೆ ಶಾಸಕ ಶಿವಗಂಗಾ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಚನ್ನಗಿರಿಯಲ್ಲಿ ಮಾತನಾಡಿದ ಅವರು, ಸಿಬಿಐ ತನಿಖೆನಾದ್ರು ಮಾಡಲಿ ಖುದ್ದು ಗೃಹಮಂತ್ರಿ ಅಮಿತಾ ಶಾ ಬಂದು ತನಿಖೆ ಮಾಡಲಿ, ಡಿಸಿಎಂ ಡಿ.ಕೆ. ಶಿವಕುಮಾರ್​​ರನ್ನ ಏನೂ ಮಾಡಿಕೊಳ್ಳೋಕೆ ಸಾಧ್ಯ ಇಲ್ಲ. ಡಿ.ಕೆ. ಶಿವಕುಮಾರ್ ಅವರು ಕರೆಕ್ಟಾಗಿ ಇದ್ದಾರೆ ಎಂದು ಹೇಳಿದ್ದಾರೆ.

ಉತ್ತಮ ಆಡಳಿತ ನೋಡಿ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಸುಪ್ರೀಂಕೋರ್ಟ್ ಆರ್ಡರ್ ಸ್ವಾಗತ ಮಾಡುತ್ತೇವೆ. ನಾವು ಹೆದುರುವ ಅವಶ್ಯಕತೆ ಇಲ್ಲ. ಮುಂಚೂಣಿಯಲ್ಲಿದ್ದವರನ್ನೂ ಕಟ್ಟಾಕೋಕೆ ಈ ರೀತಿ ಮಾಡ್ತಾ ಇದ್ದಾರೆ. ಎರಡು ವರ್ಷ ಆದ ಮೇಲೆ ಡಿಕೆಶಿ ಸಿಎಂ ಆಗ್ತಾರೆ. ಎರಡು ವರ್ಷ ಆದ ಮೇಲೆ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ನಾನೇನು ಸನ್ಯಾಸಿ ಅಲ್ಲ

ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ ಶಿವಕುಮಾರ್ ಅವರು ಹಗಲು ರಾತ್ರಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಅವರ ಕೆಲಸಕ್ಕೆ ನ್ಯಾಯ ಕೊಡಲೇಬೇಕು. ಡಿಕೆಶಿ ಸಿಎಂ ಆಗೇ ಆಗುತ್ತಾರೆ. ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.

Exit mobile version