Site icon PowerTV

ನನ್ನ ಎಕ್ಕಡ ಕೂಡ ಕಾಂಗ್ರೆಸ್​ಗೆ ಹೋಗಲ್ಲ ಎಂದು ಪೂರ್ಣಿಮಾ ತಂದೆ ಹೇಳಿದ್ರು : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ತಂದೆಯವರ ಬಗ್ಗೆ ಗೊತ್ತಿದ್ರೆ ಪಾಪ ಅವರು ಹೋಗ್ತಾ ಇರಲಿಲ್ಲ. ನನ್ನ ಎಕ್ಕಡ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಪೂರ್ಣಿಮಾ ತಂದೆ ಹೇಳಿದ್ರು. ಇದೆಲ್ಲಾ ಯಾಕೆ ಪೂರ್ಣಿಮಾಗೆ ಗೊತ್ತಾಗಲಿಲ್ಲ ಎಂದು ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಅವರ ಪತಿ ಶ್ರೀನಿವಾಸ್ ಒತ್ತಡ ಹೆಚ್ಚಿತ್ತು ಎನಿಸುತ್ತದೆ. ತನ್ನ ಪತಿಯ ರಾಜಕೀಯ ಬೆಳವಣಿಗೆಗೆ ಈ ರೀತಿಯ ನಿರ್ಧಾರವಾಗಿರಬಹುದು ಎಂದು ಹೇಳಿದರು.

ಡಿ.ಟಿ ಶ್ರೀನಿವಾಸ್ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್ ಒತ್ತಡ ಹಾಕಿರಬಹುದು. ಸಿಎಂ ಸಿದ್ದರಾಮಯ್ಯ ಒಂದು ಮಾತು ನಿಜ ಹೇಳಿದ್ರು. ನೇರವಾಗಿ ಒಪ್ಪಿಕೊಂಡ್ರು, ಎ. ಕೃಷ್ಣಪ್ಪರವರಿಗೆ ಟಿಕೆಟ್ ತಪ್ಪಿಸೋಕೆ ನಾನೇ ಕಾರಣ ಅಂತ ಹೇಳಿದ್ರು ಎಂದು ಕುಟುಕಿದರು. ಇನ್ನೂ, ಬಿಜೆಪಿಯಿಂದ ಪೂರ್ಣಿಮಾರವರನ್ನ ತಡೆಯೋ ಕೆಲಸ ಮಾಡಲಿಲ್ಲ ಅನ್ನೋ ಪ್ರಶ್ನೆಗೆ, ಒತ್ತಡದ ತೀರ್ಮಾನಗಳಿಗೆ ಸಮಾಧಾನ ಮಾಡೋಕೆ ಆಗಲ್ಲ. ಮುಂದೆ ಜನ ತೀರ್ಮಾನ ಮಾಡ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ

ಬೆಳಗಾವಿ ರಾಜಕಾರಣದ‌ ಬಗ್ಗೆ ಲೇವಡಿ ಮಾಡಿದ ಅವರು, ಸತೀಶ್ ಜಾರಕಿಹೊಳಿ ಮೌನವಾಗಿದ್ದೇನೆ ಅಂದರೆ ಅದು ನನ್ನ ವೀಕ್ನೆಸ್ ಅಲ್ಲ ಅಂತಾರೆ. ಪೈಪೋಟಿಗಿಳಿದು ರಾಜಕರಾಣ ಮಾಡುತ್ತಿದ್ದಾರೆ. ಇದರಿಂದ ಗೊತ್ತಾಗುತ್ತೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅಂತ. ಕಾಂಗ್ರೆಸ್ ಯಾವ ಬೇಗುದಿಯಲ್ಲಿ ಬೆಯುತ್ತಿದೆ? ಯಾವಾಗ ಬ್ಲಾಸ್ಟ್ ಆಗುತ್ತೋ ಗೊತ್ತಿಲ್ಲ. ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತೋ ಗೊತ್ತಿಲ್ಲ. ಅದಕ್ಕೆ ಈ‌ ರೀತಿಯ ಆಪರೇಷನ್ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

Exit mobile version