ಬೆಂಗಳೂರು : ಎಲ್ಲಾ ಬಿಚ್ಚಿಡಪ್ಪ, ನಾನು ಎಲ್ಲದಕ್ಕೂ ತಯಾರಾಗಿದ್ದೇನೆ. ಬೇಗ ಬಿಚ್ಚಿಡಲಿ, ಇವರು ಬಿಚ್ಚಿಡುವಷ್ಟರಲ್ಲಿ ಬೇರೆ ಏನಾದರೂ ಡೆವಲಪ್ಮೆಂಟ್ ಆದ್ರೆ ಅಂತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 25-30 ವರ್ಷದಿಂದ ಸಂಪಾದನೆ ಮಾಡಿಕೊಂಡಿದ್ದು ಸಾಕು. ಪ್ರಥಮವಾಗಿ ಬಂದಿದ್ದೆ ಬಂದೀಖಾನೆ ಸಚಿವರಾಗಿದ್ರಿ. ಸಾಕು ಮಾಡಿ.. ಬಿಚ್ಚಿಡ್ತೀನಿ, ಬಿಚ್ಚಿಡ್ತೀನಿ ಎಂದು ಹೇಳಿದ್ದಾರೆ.
ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿಲ್ಲ
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೃತಕ ವಿದ್ಯುತ್ ಅಭಾವವನ್ನ ಸೃಷ್ಟಿಸುತ್ತಿಲ್ಲ. ದುಡ್ಡುಹೊಡೆಯಲೂ ಹೋಗಿಲ್ಲ. ಮೇಲೆ ಇದ್ದಾರಲ್ಲ ತನಿಖೆ ಮಾಡಿಸಲಿ ಎಂದರು. ಇನ್ನು ಶ್ವೇತಪತ್ರ ಹೊರಡಿಸಲು ಆಗ್ರಹಿಸುತ್ತಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಇವರು ಹೇಳಿದ್ದನ್ನೆಲ್ಲಾ ಕೇಳಕ್ಕಾಗಲ್ಲ ಎಂದು ತಿಳಿಸಿದ್ದಾರೆ.
ಬಹಿರಂಗವಾಗಿ ಹೇಳಲು ಬಯಸುವುದಿಲ್ಲ
ಎರಡೂವರೆ ವರ್ಷದ ಬಳಿಕ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಪಕ್ಷದ ಒಳಗೆ ಕೆಲವೊಂದು ಚರ್ಚೆಗಳು ನಡೆದಿರುತ್ತವೆ. ಆ ಚರ್ಚೆಗಳನ್ನ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ನಾನು ಏನು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.



Pinco-da canlı mərclər hər gün. Pinco oyunları ilə real qazanc əldə et — pinco casino az. Pinco-da qeydiyyat etmək asandır.
Pinco kazino bonusları daim artırılır.