Site icon PowerTV

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಕ್ಕೆ ಪಡೆದ ಪೊಲೀಸ್​!

ಬಳ್ಳಾರಿ : ಜಿಲ್ಲೆಯ ಕೂಡ್ಲಿಗಿ ಪೋಲಿಸರು ಭರ್ಜರಿ ಭೇಟೆಯಾಡಿದ್ದು ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಪೋಲಿಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಖಚಿತ ಮಾಹಿತಿಯನ್ನು ಆಧರಿಸಿ ಅಕ್ಕಿ ತುಂಬಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಕೂಡ್ಲಿಗಿಯ ಎನ್.ಎಚ್.50 ರಲ್ಲಿ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಸುಮಾರು 265 ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿತ್ತು. ಸುಮಾರು 4 ಲಕ್ಷದ, 62 ಸಾವಿರದ, 740/- ರೂ ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಅಜ್ಜ ಮೊಬೈಲ್ ಕೊಡಿಸಿಲ್ಲವೆಂದು ಮೊಮ್ಮೊಗ ಆತ್ಮಹತ್ಯೆ!

ಕೂಡ್ಲಿಗಿ ಪೋಲೀಸ್ ಠಾಣೆಯ ಪೋಲೀಸರಿಂದ ಲಾರಿಯನ್ನು ವಶಕ್ಕೆ ಪಡೆದು, ತನಿಖೆಗೆ ಒಳಪಡಿಸಲಾಗಿದೆ, ಪೋಲೀಸರ ಈ ಕಾರ್ಯಚರಣೆಗೆ ವಿಜಯನಗರ ಎಸ್ಪಿ ಹರಿಬಾಬು ಅವರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version