Site icon PowerTV

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಪ್ರವೇಶ ದಿನಾಂಕ ವಿಸ್ತರಣೆ!

ಬೆಂಗಳೂರು : ಕೆಇಎಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 2023-24 ನೇ ಸಾಲಿನ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶ ದಿನಾಂಕ ವಿಸ್ತರಣೆ ಮಾಡಲಾಗಿದ್ದು ಅಕ್ಟೋಬರ್ 30 ರವರೆಗೆ ಪ್ರವೇಶ ದಿನಾಂಕವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.

ಸುಪ್ರೀಂಕೋರ್ಟ್ ಆದೇಶದಂತೆ ದಿನಾಂಕ ವಿಸ್ತರಣೆಗೆ ಯಾವುದೇ ರೀತಿ ದಂಡವನ್ನು ಪಾವತಿಸದೇ ಪ್ರವೇಶಾತಿ ಪಡೆಯಲು ಅನುಮತಿ ನೀಡಿ ಕೇವಲ ಕಾಲೇಜು ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸೀಟು ಪಡೆದು, ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಆಗದ ವಿದ್ಯಾರ್ಥಿಗಳಿಗೂ ಅಕ್ಟೋಬರ್ 30ರವರಗೆ ಕಾಲಾವಕಾಶವನ್ನ ಕೊಟ್ಟಿದೆ.

ಇದನ್ನೂ ಓದಿ: PAK vs AUS : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಿಗಿ ಬಂದೋಬಸ್ತ್

ಸರ್ಕಾರಿ ಕೋಟಾದ ಸೀಟುಗಳಿಗೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯದಂತೆ ಸೂಚನೆಯನ್ನು ನೀಡಲಾಗಿದೆ. ಸೀಟು ಹಂಚಿಕೆಯಾದ ನಂತರ ಉಳಿದ ಸರ್ಕಾರಿ ಕೋಟಾದ ಸೀಟುಗಳನ್ನು ವೆಬ್‌ಸೈಟ್ ‌ನಲ್ಲಿ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

Exit mobile version