Site icon PowerTV

Power Deficit ಸ್ಟೇಟ್ ಮಾಡಿರುವುದೇ ಕಾಂಗ್ರೆಸ್ ಸಾಧನೆ : ಶಾಸಕ ಯತ್ನಾಳ್

ವಿಜಯಪುರ : ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ Power Surplus ಸ್ಟೇಟ್ ಇಂದ ಇವರ ಆಳ್ವಿಕೆಯಲ್ಲಿ Power Deficit ಸ್ಟೇಟ್ ಮಾಡಿರುವುದೇ ಈ ಸರ್ಕಾರದ ಸಾಧನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಮಧ್ಯಮ, ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕೆಗಳು (MSME) ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೈಗಾರಿಕೆಗಳಿಗೆ ಬೇಕಾದ ಬಿಡಿ ಭಾಗಗಳು ಸೇರಿದಂತೆ ಅನೇಕ ಉತ್ಪನ್ನಗಳು, ancillary ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದ್ದಾರೆ.

ವಿದ್ಯುತ್ ಇಲ್ಲದೆ ಈ ಕೈಗಾರಿಕೆಗಳು ಏನೂ ಮಾಡಲಾಗುವುದಿಲ್ಲ, ನಿರಂತರ ವಿದ್ಯುತ್ ಇದ್ದರೆ ಮಾತ್ರ ಇಲ್ಲಿ ಉತ್ಪಾದನೆ ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ದಿಂದ ಪೀಣ್ಯ ಕೈಗಾರಿಕೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಕಾರು ಭಾಗ್ಯ ಮತ್ತೊಂದು ಸಾಧನೆ

ರೈತರಿಗೆ ನಿರಂತರ ವಿದ್ಯುತ್ ನೀಡುವ ಬದಲಿಗೆ ಆರ್ಥಿಕ ಸುಧಾರಣೆಗಳ ಹರಿಕಾರರಾದ ಸಿದ್ದರಾಮಯ್ಯ ನವರು ತೀವ್ರ ಬರವನ್ನೂ ಲೆಕ್ಕಿಸದೆ 34 ಸಚಿವರಿಗೆ ಹೊಸ ಕಾರು ಭಾಗ್ಯ ನೀಡಿರುವುದು ಈ ಸರ್ಕಾರದ ಮತ್ತೊಂದು ಸಾಧನೆ ಎಂದು ಹರಿಹಾಯ್ದಿದ್ದಾರೆ.

Exit mobile version