Site icon PowerTV

ಎಣ್ಣೆ ಏಟಲ್ಲಿ ನಡುರಸ್ತೆಯಲ್ಲೇ ಬಿದ್ದು ಒದ್ದಾಡಿದ ಹುಡುಗಿಯರು!

ಬೆಂಗಳೂರು : ನಿನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ಹುಡುಗಿಯರು ಕುಡಿದ ಮತ್ತಿನಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಚಲಿಸುತ್ತಿರುವ ಕಾರಿನ ಮೇಲೆ ಕುಳಿತು ಅವಾಂತರ ಮಾಡಿಕೊಂಡಿದ್ದಾರೆ.

ಕುಡಿದ‌ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೀವಿ ಎಂಬುದನ್ನೂ ತಿಳಿಯದೇ ನಡುರಸ್ತೆಯಲ್ಲಿಯೇ ಬಿದ್ದು ‌ಒದ್ದಾಡಿ ಹುಚ್ಚಾಟ ಮೆರೆದಿದ್ದಾರೆ. ಕೋರಮಂಗಲದ ಡ್ರಂಕನ್ ಡ್ಯಾಡಿ ಎಂಬ ಪಬ್ ಮುಂದೆ ಅವಾಂತರ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ 12.30 ರಿಂದ 1 ಗಂಟೆಯ ನಡುವೆ ಈ ಘಟನೆ ನಡೆದಿದೆ. ಪಾನಮತ್ತ ಯುವತಿಯರು ಕೆಲ ಸಾರ್ವಜನಿಕರಿಗೆ ಹಲ್ಲೆ‌ ಮಾಡಿರುವ ಆರೋಪ ಸಹ ಕೇಳಿಬಂದಿದೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯುವತಿಯರಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ.

ಮುನಿರತ್ನ ಬಲಗೈ ಭಂಟನ ಬಂಧನ

ಬಿಜೆಪಿ ಶಾಸಕ ಮುನಿರತ್ನ ಬಲಗೈ ಭಂಟ ಮಾಜಿ ಕಾರ್ಪೊರೇಟರ್ ವೆಂಕಟೇಶನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರ ಚಂದ್ರು ಕೊಟ್ಟ ದೂರಿನ ಮೇರೆಗೆ ಬಂಧಿಸಲಾಗಿದೆ. ಮೂರು ಕೋಟಿ ರೂಪಾಯಿ ಚೆಕ್ ಪಡೆದ ಆರೋಪ ಹಿನ್ನೆಲೆ ಇಂದು ಬೆಳಗ್ಗೆ ವೆಂಕಟೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version