Site icon PowerTV

ನಾನು ವಿಧಾನಸೌಧದಿಂದ ಆಡಳಿತ ನಡೆಸಬೇಕು, ನಿಮ್ಮ ಮನೆಯಿಂದಲ್ಲ : ಪ್ರಿಯಾಂಕ್ ಖರ್ಗೆ

ಕಲಬುರಗಿ : ನಾನು ರಾಜ್ಯದ ಮಂತ್ರಿ ಇದ್ದೇನೆ. ಉಮೇಶ್ ಜಾಧವ್ ಅವರೇ, ನಾನು ವಿಧಾನಸೌಧದಿಂದ ಆಡಳಿತ ನಡೆಸಬೇಕು ಹೊರತು ನಿಮ್ಮ ಮನೆಯಿಂದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ‌ ಮೇಲೆ ಯಾರು ಆಕ್ಟಿವ್ ಆಗಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದ್ರೆ ನಮ್ಮ ಚಿಂಚೋಳಿ ಸಂಸದರು ಮಾತ್ರ ಫುಲ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ನಾನು ಸಚಿವನಾದ ಮೇಲೆ ಬಿಜೆಪಿಯವರು ಫುಲ್ ಆಕ್ಟಿವ್ ಆಗಿದ್ದಾರೆ ಎಂದು ಕುಟುಕಿದರು.

ಚಿಂಚೋಳಿ ಸಂಸದ ಉಮೇಶ್ ಜಾಧವ್ ಅವರ ಗಮನಕ್ಕೆ ತರುತ್ತೇನೆ. ನಾನು ಇಲ್ಲಿಯವರೆಗೆ 43 ಮೀಟಿಂಗ್ ಮಾಡಿದ್ದೇನೆ. ಚಿಂಚೋಳಿ ಎಂಪಿ ಅವರಿಗೆ ಕೇಳುತ್ತೇನೆ, ನಿಮ್ಮ ಅವಧಿಯಲ್ಲಿ ಎಷ್ಟು ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದೀರಿ? ನಿಮಗೆ ಕೈಲಾಗದ, ಪ್ರಾಬ್ಲಂ ಬಗೆಹರಿಸೋಕೆ ಆಗದೆ ಇರೋದನ್ನ ನಾನು ಬಗೆಹರಿಸಿದ್ದೇನೆ ಎಂದು ಹರಿಹಾಯ್ದರು.

ಮೋದಿ ವಿದೇಶಕ್ಕೆ ವಿಶ್ವಗುರು

ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ವಿಶ್ವಗುರು. ಪ್ರಿಯಾಂಕ್ ಖರ್ಗೆ ವಿದೇಶಕ್ಕೆ ಹೋದರೆ, ವಿದೇಶಕ್ಕೆ ಹೊದ್ರು ಅಂತಾರೆ. ಮಿಸ್ಟರ್ ಜಾಧವ್ ನೀವು ಹೋದ್ರೆ ನಿಮ್ಮ ನಾಯಕರು ಬಾಗಿಲು ತೆರೆದಿಲ್ಲ. ಇನ್ನ ನಾನು ಹೋದ್ರು ನಿಮ್ಮ ನಾಯಕರು ಬಾಗಿಲು ತೆರೆದಿಲ್ಲ. ಇನ್ನೂ ಇಂತಹದರಲ್ಲಿ ನಮ್ಮ ಎಂಪಿ ಹೋದ್ರೆ ಬಾಗಿಲು ತೆರಯುತ್ತಾರಾ ಮಿಸ್ಟರ್ ಜಾಧವ್? ನಾನು ನಮ್ಮ ಪಿಎನೇ ಕಳುಹಿಸುತ್ತೇನೆ ನೀವು ಬಾಗಿಲು ತೆರೆಯೋಕೆ ಹೇಳಿ ನಿಮ್ಮ ನಾಯಕರಿಗೆ. ನರೇಗಾ ಹಣ ಮತ್ತು ಮಾನವ ದಿನಗಳನ್ನು ಹೆಚ್ಚು ಮಾಡೋದಕ್ಕೆ ಹೇಳಿ ಎಂದು ಚಾಟಿ ಬೀಸಿದರು.

Exit mobile version