Site icon PowerTV

ನನ್ನನ್ನ ಕಾಂಗ್ರೆಸ್​ನ ಕೃಷ್ಣಪ್ಪರ ಮಗಳು ಅಂತಾರೆ : ಪೂರ್ಣಿಮಾ ಶ್ರೀನಿವಾಸ್

ಬೆಂಗಳೂರು : ನನ್ನನ್ನು ಶಾಸಕಿ, ಮಾಜಿ ಶಾಸಕಿ ಎನ್ನುವುದಕ್ಕಿಂತ ನನ್ನನ್ನು ಕಾಂಗ್ರೆಸ್​ ಕೃಷ್ಣಪ್ಪರ ಮಗಳು ಅಂತಾರೆ. ಕೆಲವು ವಿಚಾರದಿಂದ ತಂದೆ ಕಾಂಗ್ರೆಸ್ ‌ಪಕ್ಷ ಬಿಡುವಂತಾಯಿತು ಎಂದು ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜೊತೆ ಮತ್ತೊಂದು ಪಯಣ ಶುರು ಆಗ್ತಿದೆ. ಸ್ವಾಗತಿಸಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ‌ಡಿಸಿಎಂ ಡಿ.ಕೆ ಶಿವಕುಮಾರ್​ ಅವರಿಗೆ ಮನವಿ ಮಾಡುತ್ತೇನೆ. ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದವರಿಗೆ ರಾಜಕೀಯ ‌ಸ್ಥಾನಮಾನ ಸಿಕ್ತಿಲ್ಲ. ಈ ಎಲ್ಲಾ ಸಮುದಾಯಕ್ಕೆ ಆಶೀರ್ವಾದ ಸದಾ ಇರಬೇಕು ಎಂದು ಹೇಳಿದರು.

ಭಾರತ್ ಮಾತಾಕಿ ಜೈ ಅನ್ನಬೇಕು

ಡಿ.ಟಿ ಶ್ರೀನಿವಾಸ್ ಮಾತನಾಡಿ, ದೇಶದ 140 ಕೋಟಿ ಜನ ಖಾಸಗಿ ಸ್ವತ್ತು ಆಗಬಾರದು. ಅದಕ್ಕೆ ಭಾರತ್ ಮಾತಾಕಿ ಜೈ ಅನ್ನಬೇಕು. ಕಾಂಗ್ರೆಸ್​ ಪಕ್ಷಕ್ಕೆ ವಾಪಾಸ್ ಬಂದಿದ್ದೇವೆ. ದೊಡ್ಡ ಬೇಡಿಕೆ ಏನಿಲ್ಲ, ನಮ್ಮ ಸಮುದಾಯದಲ್ಲಿ ಹಟ್ಟಿಗಳಲ್ಲಿ ವಾಸಿಸುತ್ತಿರೋರನ್ನ ಎಸ್ಟಿಗೆ ಸೇರಿಸಬೇಕು. ಅದಕ್ಕಾಗಿ ಪಟ್ಟಿ ಕೇಂದ್ರಕ್ಕೆ ಹೋಗಿದೆ. ಕನಿಷ್ಟ ಜೀವನ ನಡೆಸುತ್ತಿರುವ ಗೊಲ್ಲ, ಹೆಳವ ಸೇರಿ ಹಲವು ಸಮುದಾಯಕ್ಕೆ ನ್ಯಾಯಸಿಗಬೇಕು. ಕುಲಶಾಸ್ತ್ರೀಯ ಅಧ್ಯಯನಕ್ಕೆ 2 ಕೋಟಿಯಿಂದ 5 ಕೋಟಿಗೆ ಏರಿಸಿ ಪ್ರವರ್ಗಗಳ ಕುಲಶಾಸ್ರ್ತೀಯ ಅಧ್ಯಯನ ಆಗಬೇಕು ಎಂದು ಅವಲೊತ್ತುಕೊಂಡರು.

Exit mobile version