Site icon PowerTV

ಸರ್ಕಾರದಿಂದ 33 ಸಚಿವರಿಗೆ ಕಾರು ಭಾಗ್ಯ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬಹುತೇಕ ಜಲಾಶಯಗಳು ಭರ್ತಿಯಾಗದೇ ಬರಗಾಲ ಆವರಿಸಿದೆ. ಈ ಮಧ್ಯೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನಾವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದೀಗ 33 ಸಚಿವರಿಗೆ ಇನ್ನೋವಾ ಹೈಬ್ರೀಡ್ ಕಾರು ಖರೀದಿಸಿದೆ.

ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಎಂದು ಹೇಳುತ್ತಿದ್ದ ಸರ್ಕಾರದಿಂದಲೇ ಕಾರು ಖರೀದಿಯಾಗಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ 9 ಕೋಟಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಬ್ರೀಡ್ ಕಾರ್ ಖರೀದಿಸಲಾಗಿದೆ.

ಇದನ್ನೂ ಓದಿ: ಹೊಸ ಸರ್ಕಾರಿ ಕಾರು ಬೇಡ ಎಂದ ಸಚಿವ ಸಂತೋಷ್ ಲಾಡ್

ಅಗಸ್ಟ್ ತಿಂಗಳ 17ರಂದೇ 33 ಇನ್ನೋವಾ ಕಾರು ಖರೀದಿಗಾಗಿ ಹಣ ಬಿಡುಗಡೆ ಮಾಡಲಾಗಿತ್ತು. ದಸರಾ ಆರಂಭವಾಗುತ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಕಾರುಗಳು ಬಂದಿವೆ.

Exit mobile version