Site icon PowerTV

ವಿಶ್ವಕಪ್​​​​​​ ಹಿನ್ನೆಲೆ ಮೆಟ್ರೋ ವಿಶೇಷ ಆಫರ್!

ಬೆಂಗಳೂರು: ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯಾವಳಿ ಇರುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಿದ್ದು ಮಾತ್ರವಲ್ಲದೇ ವಿಶೇಷ ದರ ರಿಯಾಯಿತಿಯನ್ನೂ ಘೋಷಿಸಲಾಗಿದೆ.

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕೂತಹಲಕಾರಿ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ವಿಶೇಷ ಆಫರ್ ಘೋಷಣೆ ಮಾಡಿದೆ. ಭಾರತ-ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದ್ದು, ಇದೇ ಸಂದರ್ಭದಲ್ಲೇ ಕ್ರಿಕೆಟ್​ ಪ್ರೇಮಿಗಳಿಗೆ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ಹೊಸ​ ಆಫರ್​ ನೀಡಿದೆ.

ಸಂಜೆ 4 ಗಂಟೆಯಿಂದಲೇ ಟಿಕೆಟ್​ಗಳು ಮಾರಾಟವಾಗುತ್ತಿದೆ. QR ಕೋಡ್ ಸಹಿತ ಪೇಪರ್ ಟಿಕೆಟ್​ಗಳು ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಕ್ಕೆ ಅನುಮತಿಸಲಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಬೆಂಗಳೂರಿನಲ್ಲಿ ನಡೆಯಲಿರುವ ಎಲ್ಲ ಐದು ಪಂದ್ಯಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಎಂದು BMRCL ಘೋಷಣೆ ಮಾಡಿದೆ.

Exit mobile version