Site icon PowerTV

PIC OF THE DAY : 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ

ಬೆಂಗಳೂರು : ಬ್ಯಾಟಿಂಗ್ ಮೂಲಕ ಮೈದಾನದಲ್ಲಿ ವಿರಾಟ ರೂಪ ಪ್ರದರ್ಶಿಸುತ್ತಿದ್ದ ರನ್ ಮೆಷಿನ್ ವಿರಾಟ್ ಕೊಹ್ಲಿ ಇಂದು ಬೌಲಿಂಗ್ ಮಾಡಿ ಗಮನ ಸೆಳೆದರು.

ಪುಣೆಯಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೂರೇ ಮೂರು ಎಸೆತಗಳನ್ನು ಬೌಲ್ ಮಾಡುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣರಾದರು. ಈ ಮೂಲಕ ಇಷ್ಟು ದಿನ ತಮ್ಮ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಬೌಲಿಂಗ್ ನೋಡುವ ಅವಕಾಶವೂ ಒದಗಿ ಬಂದಿತು.

ಬಾಂಗ್ಲಾದೇಶ ಇನ್ನಿಂಗ್ಸ್​ನ 9ನೇ ಓವರ್​ ಬೌಲ್ ಮಾಡಲು ಬಂದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ವೇಳೆ ಇಂಜುರಿಗೊಳಗಾದರು. ಇದರಿಂದ ನಾಯಕ ರೋಹಿತ್ ಶರ್ಮಾ ಆ ಓವರ್​ ಅನ್ನು ಪೂರ್ಣಗೊಳಿಸುವ ಜವಬ್ದಾರಿಯನ್ನು ವಿರಾಟ್​ ಕೊಹ್ಲಿಗೆ ನೀಡಿದರು. ಹಾರ್ದಿಕ್ ಪಾಂಡ್ಯ ತಮ್ಮ ಕಾಲಿಗೆ ಗಾಯವಾಗಿತ್ತು. ಹೆಚ್ಚು ನೋವಿನಿಂದ ಬಳಲುತ್ತಿದ್ದ ಪಾಂಡ್ಯ ಪಿಸಿಯೋ ಸಹಾಯದಿಂದ ಮೈದಾನದಿಂದ ಹೊರ ನಡೆದರು. ಹೀಗಾಗಿ 9ನೇ ಓವರ್​ನಲ್ಲಿ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಬೌಲ್ ಮಾಡಿದರು.

PIC OF THE DAY

ಇಷ್ಟು ದಿನ ನೆಟ್ಸ್​ನಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ನೋಡಿದ್ದೇವೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದು ತೀರಾ ಕಡಿಮೆ ಎಂದು ವಿರಾಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕೊಹ್ಲಿ ಬೌಲಿಂಗ್ ಮಾಡಿದ ಮೂರು ಭಂಗಿಯ ಫೋಟೋವನ್ನು PIC OF THE DAY ಎಂದು ಪೋಸ್ಟ್ ಮಾಡಿದ್ದಾರೆ.

Exit mobile version