Site icon PowerTV

ಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆ ಉಂಟಾಗಿದೆ : ಕಾಂಗ್ರೆಸ್

ಬೆಂಗಳೂರು : ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆ ಉಂಟಾಗಿದೆ ಎಂದು ಬಿಜೆಪಿಗರನ್ನು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.​

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಕಣ್ಣು ಕುರುಡಾದ ಕಾರಣ ಬೇರೆಯವರನ್ನು ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಕುರುಡುತನವನ್ನು ಸರಿಪಡಿಸಿಕೊಳ್ಳಲಿ. ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ, ದೃಷ್ಟಿ ದೋಷ ಸರಿಹೋಗಲಿ ಅಂತ ಹಾರೈಸುತ್ತೇವೆ ಎಂದು ಕುಟುಕಿದೆ.

ಬಿಜೆಪಿ ಮೊದಲು ಸುಳ್ಳುಗಳನ್ನು ಹಬ್ಬಿಸಲು ವಾಟ್ಸ್​ಆಪ್ ಯೂನಿವರ್ಸಿಟಿಯನ್ನು ಬಳಸುತ್ತಿತ್ತು. ಈಗ ಪಕ್ಷದ ಅಧಿಕೃತ ಖಾತೆಯಲ್ಲೇ ನಿರ್ಲಜ್ಜತೆಯಿಂದ ಸುಳ್ಳುಗಳನ್ನು ಬಿತ್ತರಿಸುತ್ತಿದೆ. ಬಿಜೆಪಿಯ ಐಟಿ ಸೆಲ್ ಎಂದರೆ ಫೇಕ್ ಫ್ಯಾಕ್ಟರಿ ಎನ್ನುವುದು ಜಗದ್ಕುಖ್ಯಾತ ಸತ್ಯ ಎಂದು ವಾಗ್ದಾಳಿ ನಡೆಸಿದೆ.

ಮಾನ ಮರ್ಯಾದೆ ಇಲ್ಲದೆ, ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದೆ ಇಂತಹ ನಿರಾಧಾರ ಸುಳ್ಳುಗಳನ್ನು ಹಬ್ಬಿಸುತ್ತಿರುವ ಬಿಜೆಪಿ ಶೀಘ್ರವೇ ಕಾನೂನು ಕ್ರಮ ಎದುರಿಸಲು ಸಿದ್ದರಾಗಲಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

Exit mobile version