Site icon PowerTV

ಬರೆದಿಟ್ಟುಕೊಳ್ಳಿ ಡಿ.ಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ : ಈಶ್ವರಪ್ಪ ಭವಿಷ್ಯ

ಶಿವಮೊಗ್ಗ : ಡಿ.ಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬೇಲ್ ನಲ್ಲಿದ್ದಾರೆ. ರೇಡ್ ಸಂದರ್ಭದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಅವರು ಜೈಲಿಗೆ ಹೋಗಿದ್ದರು. ಅದು ಬಹಿರಂಗವಾಗಿ  ಹೇಳುವುದು ತಪ್ಪಾ? ಡಿಕೆಶಿ ಅಕ್ರಮ ಸಂಪಾದನೆ ಪ್ರಕರಣ ಸಿಬಿಐ ತನಿಖೆ ಮಾಡುತ್ತಿದೆ. ಬರೆದಿಟ್ಟುಕೊಳ್ಳಿ  ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಭಂಡತನದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಸಂಬಂಧಿಸಿದ ನೂರಾರು ಕೋಟಿ ಹಣ ಸಿಕ್ಕಿದೆ. ಡಿಕೆಶಿ ಉತ್ತರದಲ್ಲೂ ಗೂಂಡಾಗಿರಿ ಕಂಡು ಬರುತ್ತದೆ. ಸಿಬಿಐ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮೊನ್ನೆ 100 ಕೋಟಿ ಅಕ್ರಮ ಹಣ ಪತ್ತೆಯಾಗಿದೆ. ಅದರ ತನಿಖೆ ಮಾಡಿ ಅಂತ ಬಿಜೆಪಿ ಕೇಳುವುದು ತಪ್ಪು. ನೀವು ಕಳ್ಳರು ಅಂತ ನಾವು ಇನ್ನು ನೇರವಾಗಿ ಹೇಳಿಲ್ಲ. ಡಿಸಿಎಂ ಗೂಂಡಾಗಿರಿ ವರ್ತನೆ ತೋರುತ್ತಿದ್ದಾರೆ. ಬಿಬಿಎಂಪಿಯಿಂದ ಹಣ ಬಿಡುಗಡೆ ಸಂಬಂಧ ಅದರ ಕಮೀಷನ್ ಹಣ ಪತ್ತೆ ಆಗಿದೆ. ಸಿಎಂ ಅವರೇ ಈ ಪ್ರಕರಣ ಸಿಬಿಐಗೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.

ರಾಮಾಯಣ, ಮಹಾಭಾರತ ಬರೆಯಬಹುದು

ಅಧ್ಯಕ್ಷರ ಬಗ್ಗೆ ಮಾತನಾಡುವ ಸೊಕ್ಕು ರಾಮಲಿಂಗಾರೆಡ್ಡಿಗೆ ಬಂದಿದೆ. ಆಯನೂರು ತಲೆಕಟ್ಟವರ ಬಗ್ಗೆ ನಾನು ಮಾತನಾಡುವುದಿಲ್ಲ. ಆಯನೂರು ಎಷ್ಟು ಪಕ್ಷ ಹೋಗಿ ಬಂದಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಬಗ್ಗೆ ರಾಮಾಯಣ, ಮಹಾಭಾರತ ಬರೆಯಬಹುದು. ಅಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

Exit mobile version