Site icon PowerTV

ರೈತನ ಮೇಲೆ PSI ಹಲ್ಲೆ; ಕ್ರಮಕ್ಕೆ ಆಗ್ರಹ!

ಕೊಪ್ಪಳ: ರೈತನ ಮೇಲೆ PSI ಹಲ್ಲೆ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕುಕನೂರು ಪೊಲೀಸ್ ಠಾಣೆಯ PSI ಗುರುರಾಜ ಹಲ್ಲೆ ಮಾಡಿದ್ದಾರೆ. ಚಿಕ್ಕೆನಕೊಪ್ಪ ಗ್ರಾಮದ ರೈತ ಮಹಾಂತಯ್ಯ ಅಂಗಡಿ ಹಲ್ಲೆಗೊಳಗಾದ ವ್ಯಕ್ತಿ. ವಿಂಡ್ ಪವರ್ ಕಂಪನಿಯ ವಕಾಲತ್ತು ವಹಿಸಿ ರೈತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ತನ್ನ ಹಸುಗೂಸು ಗಂಡು ಮಗುವನ್ನು ಕೊಂದು ಕೆರೆಗೆ ಎಸೆದ ಪಾಪಿ ತಂದೆ!

ರೈತ ಮಹಾಂತಯ್ಯನ ಜಮೀನಿನ‌ ಪಕ್ಕದಲ್ಲಿ ವಿಂಡ್ ಪವರ್ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿಯಿಂದ ಮಹಾಂತಯ್ಯನ ಜಮೀನಿನಲ್ಲಿನ ಬೆಳೆಗೆ ಹಾನಿಯಾಗುವ ಬಗ್ಗೆ ಕಂಪನಿಗೆ ರೈತ ಮಹಾಂತಯ್ಯ ಪ್ರಶ್ನಿಸಿದ್ದರು. ಕಾಮಗಾರಿ ಪ್ರಶ್ನಿಸಿದ್ದಕ್ಕೆ ರೈತ ಮಹಾಂತಯ್ಯನ ಮೇಲೆ PSI ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಜೀಪಿನಲ್ಲಿ ಮಹಾಂತಯ್ಯನನ್ನು ಕೂಡಿ ಹಾಕಿ, ಅಶ್ಲೀಲವಾಗಿ ಬೈದು ಹಲ್ಲೆ ನಡೆಸಿದ್ದಾರೆ. ರೈತನ ಮೇಲೆ ಹಲ್ಲೆ ನಡೆಸಿದ ಗುರುರಾಜ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

Exit mobile version