ಬೆಂಗಳೂರು : ನಾನು ಉಸ್ತುವಾರಿ, ನಂದೇ ನಡೆಯಬೇಕು ಎನ್ನೋ ಮೆಂಟಾಲಿಟಿ ನನ್ನದಲ್ಲ. ನನ್ನ ಸೈಲೆನ್ಸ್ ನನ್ನ ದೌರ್ಬಲ್ಯ ಅಲ್ಲ, ಕಳೆದ 30 ವರ್ಷದ ರಾಜಕೀಯದಲ್ಲಿ ಇದು ಸಕ್ಸಸ್ ಕೊಟ್ಟಿದೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾನ್ಸ್ಫರ್ ವಿಷಯದಲ್ಲಿ ಹಿಂದೆ ಕೆಲವು ಗೊಂದಲ ಆಗಿತ್ತು. ಈಗ ಟ್ರಾನ್ಸ್ಫರ್ ವಿಚಾರ ಮುಗಿದು ಹೋದ ಕಥೆ ಎಂದು ತಿಳಿಸಿದ್ದಾರೆ.
ಒಂದು ಬಾರಿ ಕೆಲವು ಶಾಸಕರ ಮಧ್ಯೆ ಗೊಂದಲ ಆಗಿತ್ತು. ಹಲವು ಬಾರಿ ಕಾಂಪ್ರಮೈಸ್ ಆಗಿದ್ದೇನೆ. ಮುಂದೆಯೂ ಪಕ್ಷದ ಸಲುವಾಗಿ ಕಾಂಪ್ರಮೈಸ್ ಆಗ್ತೇನೆ. ಏನಾದ್ರೂ ಹಸ್ತಕ್ಷೇಪ ಹೊರಗಿನವರಿಂದ ಆದ್ರೆ ನಾನು ನೇರವಾಗಿ ಹೇಳ್ತೇನೆ. ಅಸಮಾಧಾನ ಅಂತೂ ನನಗೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗ್ತೇವೆ ಎಂದು ಹೇಳಿದ್ದಾರೆ.
ಲಕ್ಷ್ಮಿ ಜೊತೆ ಯಾವುದೇ ಕಿರಿಕಿರಿಯಿಲ್ಲ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನು ಸಂಭಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ, ಅವರು ಎರಡು ಬಾರಿ ಶಾಸಕಿಯಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.



Pinco yeni oyunçular üçün təkliflər verir. Futbol mərcləri üçün əla şans buradadır: pinco azərbaycan. Pinco oyunçular üçün əla seçimdir.
Pinco oyunları yüksək keyfiyyətlidir.