Site icon PowerTV

ಸತೀಶ್ ಜಾರಿಕಿಹೊಳಿಗೆ ಕೆಳಮಟ್ಟದ ರಾಜಕಾರಣ ಮಾಡುವ ಅವಶ್ಯಕತೆಯಿಲ್ಲ : ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಬೆಳಗಾವಿಯಲ್ಲಿ ಸಚಿವ ಸತೀಶ್​​ ಜಾರಕಿಹೊಳಿ ಶಕ್ತಿ ಪ್ರದರ್ಶನ ನಡೆಸಿದ್ದಾರೆಂಬ ವಿಚಾರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​​ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು​​, ಇದೆಲ್ಲ ಕಟ್ಟು ಕಥೆ ಬೇಡ ಬ್ರದರ್.. ಡಿಸಿಎಂ ಡಿ.ಕೆ.ಶಿವಕುಮಾರ್​​ ವಿರುದ್ದ ಶಾಸಕರನ್ನು ಎತ್ತಿ ಕಟ್ಟುತ್ತಿದ್ದಾರೆ ಅಂತ ಎಷ್ಟು ಚಂದ ಕೇಳ್ತಿಯಾ? ಎಂದು ಹೇಳಿದ್ದಾರೆ

ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆಗೆ ನಾನೂ ಹೋಗ್ತಾ ಇದ್ದೆ ಗೊತ್ತಾ ನಿಮಗದು? ಮೈಸೂರಿಗೆ ಟ್ರೇನ್ ಬುಕ್ ಮಾಡ್ತಿದ್ದೇವೆ ಬರ್ತೀರಾ ಅಂದಾಗ ನಾನೂ ಬರ್ತೀನಿ ಅಂದಿದೆ. 15ನೇ ತಾರೀಖು ರಾತ್ರಿ ನಾನೂ ಕೂಡ ಟ್ರೈನ್​ಗೆ ಬರೋದಿತ್ತು. 16ಕ್ಕೆ ನನ್ನ ಶುಗರ್ ಫ್ಯಾಕ್ಟರಿ ಬಾಯ್ಲರ್ ಉದ್ಘಾಟನೆ ಅಂತ ನಾನು ಹೋಗಲಿಲ್ಲ ಎಂದು ತಿಳಿಸಿದ್ದಾರೆ.

ಸತೀಶಣ್ಣ ಬಹಳ ಮುತ್ಸದ್ದಿ ರಾಜಕಾರಣಿ

ಇಷ್ಟೇ ಆಗಿದ್ದು. ಇದರಲ್ಲಿ ಯಾವ ಭಿನ್ನಮತವೂ ಇಲ್ಲ. ಇದೆಲ್ಲ ಕೇವಲ ಸೃಷ್ಟಿ. ಸತೀಶ್ ಅಣ್ಣ ಬಹಳ ಮುತ್ಸದ್ದಿ ರಾಜಕಾರಣಿ, ಉನ್ನತ ಸ್ಥಾನದಲ್ಲಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಹೋಗಿ ರಾಜಕಾರಣ ಮಾಡುವ ಅವಶ್ಯಕತೆ ಅವರಿಗೂ ಇಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Exit mobile version