Site icon PowerTV

ತೆರಿಗೆ ಅಂತ ಹಣವನ್ನ ಲೂಟಿ ಹೊಡೆಯುತ್ತಿದ್ದಾರೆ : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ತೆರಿಗೆ ಹಣವನ್ನು ಲೂಟಿ ಮಾಡ್ತಿದ್ದಾರೆ. ನಾಳೆ ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಹೇಳುತ್ತೇನೆ. ವಿದ್ಯುತ್ ಶಕ್ತಿಯ ಇಲಾಖೆಯ ಅಂಕಿ ಅಂಶಗಳನ್ನು ನಾಳೆ ನಿಮ್ಮ ಮುಂದೆ ಇಡ್ತಿನಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕೆಲವು ನಿರ್ಣಯಗಳಿಂದ ಸರ್ಕಾರ ರಚನೆಯಾಗಿ ಅಕ್ಟೋಬರ್ 15ರವರೆಗೆ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಏನೆಲ್ಲಾ ಚರ್ಚೆ ಮಾಡಿದ್ದಾರೆ. ಕೊರತೆ ಅಂತ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಯ ನಂತರ ರಾಜಕೀಯ ಘಟನೆಗಳು ನಡೆದಿದೆ. ಹಳೆಯ ಘಟಕಗಳನ್ನ ವಿಸರ್ಜನೆ ಮಾಡಿ ನೂತನ ಕಮಿಟಿ ರಚನೆ ಮಾಡಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ನೊಂದಣಿ ಮಾಡುವುದಕ್ಕೆ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯದಶಮಿ ನಂತರ ಮತ್ತೆ ಸಭೆ

ಜಿಲ್ಲಾಧ್ಯಕ್ಷರು ಒಳಗೊಂಡಂತೆ ತೀರ್ಮಾನವನ್ನ ರಾಷ್ಟ್ರೀಯ ಅಧ್ಯಕ್ಷರಿಗೆ ಕೊಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಪಕ್ಷದ ಸಂಘಟನೆಗೆ ವಿಜಯದಶಮಿ ನಂತರ ಮತ್ತೆ ಸಭೆ ಸೇರಿಸಲಾಗುತ್ತೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಭೆ ಮಾಡಲಾಗುತ್ತದೆ ಎಂದು ಹೇಳಿದರು.

Exit mobile version