Site icon PowerTV

ಕಾಂಗ್ರೆಸ್​ನವರು ಆಸ್ತಿಕರಲ್ಲ, ನಾಸ್ತಿಕರು : ಅಶ್ವತ್ಥ ನಾರಾಯಣ್

ಬೆಂಗಳೂರು : ಕಾಂಗ್ರೆಸ್​ನವರು ಆಸ್ತಿಕರಲ್ಲ.. ನಾಸ್ತಿಕರ ತರ ನಡೆದುಕೊಳ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮದ ಬಗ್ಗೆ ಮಾತಾಡಿದಾಗಲೂ ಸಮರ್ಥನೆ ಮಾಡಿಕೊಂಡ್ರು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರ ಸರ್ಕಾರ ಜನರಿಗೆ ಕೆಮಿಕಲ್ ಮಿಶ್ರಿತ ಅರಿಶಿಣ ಕೊಡ್ತಾ ಇರೋದನ್ನ ತಡೆಯಬೇಕಲ್ಲ. ಅದನ್ನು ಬಿಟ್ಟು ಪೂಜೆಯಲ್ಲಿ ಅರಿಶಿಣ ಕುಂಕುಮ ಬ್ಯಾನ್​ ಮಾಡಿದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮನೆಗೇ ಬೀಗ ಹಾಕಿದ್ರೆ ಬಿಡ್ತಾರಾ?

ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂರನ್ನು ಜೆಡಿಎಸ್​ ಪಕ್ಷದಿಂದಲೇ ವಜಾಗೊಳಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ್ದಾರೆ. ಏನೋ ನಂಬಿಕೆಯಿಂದ ಅಧ್ಯಕ್ಷರನ್ನಾಗಿ ಮಾಡಿ ಕೀ ಕೊಟ್ಟಿದ್ರು. ಆದರೆ, ಕೀ ತಗೊಂಡು ಹೋಗಿ ಮನೆಗೆ ಬೀಗ ಹಾಕಿದ್ರೆ ಬಿಡ್ತಾರಾ? ಎಂದು ಹೇಳಿದ್ದಾರೆ.

Exit mobile version