Site icon PowerTV

ಫುಟ್​ಪಾತ್​ ಮೇಲೆ ನುಗ್ಗಿದ ಕಾರು, ಓರ್ವ ಯುವತಿ ಸಾವು!

ಮಂಗಳೂರು : ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಹೆಣ್ಣುಮಕ್ಕಳ ಮೇಲೆ ಕಾರು ಹರಿದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿರುವ ಘಟನೆ ಮಂಗಳೂರಿನ ಲೇಡಿಹಿಲ್‌ನಲ್ಲಿ ನಡೆದಿದೆ.

ರೂಪಶ್ರೀ ಸಾವನ್ನಪ್ಪಿದ ಯುವತಿ. ಘಟನೆಯಲ್ಲಿ ಓರ್ವ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ವಾತಿ, ಹಿತನ್ವಿ, ಕಾರ್ತಿಕಾ ಮತ್ತು ಯತಿಕಾ ಎಂದು ಗುರುತಿಸಲಾಗಿದೆ. ಯುವತಿಯರು ಲೇಡಿಹಿಲ್‌ನ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಯಾನ್ ಕಾರು ಇವರ ಮೇಲೆ ಹರಿದಿದೆ.

ವೇಗವಾದ ಚಾಲನೆ ಮತ್ತು ಕಾರು ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಯುವತಿಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕ ಕಮಲೇಶ್ ಬಲದೇವ್ ಬಳಿಕ ತಂದೆಯ ಜೊತೆ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version