Site icon PowerTV

ಸತೀಶ್ ಜಾರಕಿಹೊಳಿ 20 ಶಾಸಕರ ಜೊತೆ ಫಾರಿನ್ ಕಂಟ್ರಿಗೆ ಹೋಗ್ತಿರಬಹುದು : ಡಾ.ಜಿ ಪರಮೇಶ್ವರ್

ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ 20 ಶಾಸಕರ ಜೊತೆ ವಿದೇಶ ಪ್ರವಾಸ ವಿಚಾರ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೇನೋ ಸ್ನೇಹಿತರು ಫಾರಿನ್ ಕಂಟ್ರಿಗೆ ಹೋಗ್ತಿರಬಹುದು. ವಿದೇಶಕ್ಕೆ ಹೋಗೋದ್ರ ಬಗ್ಗೆ ಅರ್ಥ ಕಲ್ಪಿಸೋದು ಬೇಡ. ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಹೇಳಿದ್ದಾರೆ.

ಐಟಿ ದಾಳಿ ಸಿಬಿಐ ತನಿಖೆಗೆ ನೀಡಬೇಕು ಎಂಬ ಬಿಜೆಪಿಗರ ಆಗ್ರಹದ ಬಗ್ಗೆ ಮಾತನಾಡಿದ ಅವರು, ಅವರವರು ಆರೋಪ ಮಾಡಿಕೊಳ್ತಾರೆ. ಐಟಿ ಡಿಪಾರ್ಟ್‌ಮೆಂಟ್ ಸಿಬಿಐಗೆ ಕೊಡಬೇಕು ಅಂತಿದ್ರೆ ಅವರೇ ಕೊಡ್ತಾರೆ. ಪಂಚರಾಜ್ಯಗಳಿಗೆ ಹಣ ಕಳಿಸ್ತಾರೆ ಅಂತ ಹೇಳ್ತಾರೆ. ಅವಕಾಶ ಸಿಕ್ಕಾಗ ಬಿಜೆಪಿಯವರು ಹೀಗೆ ಹೇಳ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ತಿಳಿಸಿದ್ದಾರೆ.

ನಾನು ನಿನ್ನೆ ಹೊರ ದೇಶಕ್ಕೆ ಹೋಗಿದ್ದೆ

ರಮೇಶ್ ಜಾರಕಿಹೊಳಿ ಶೆಟ್ಟರ್ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ನಿನ್ನೆ ಹೊರ ದೇಶಕ್ಕೆ ಹೋಗಿದ್ದವನು ನಿನ್ನೆ ಬಂದಿದ್ದೇನೆ. ಈ ಬಗ್ಗೆ ತಿಳಿದುಕೊಂಡು ರಿಯಾಲಿಟಿ ಮಾತನಾಡ್ತೀನಿ. ಆಪರೇಷನ್ ಆಗ್ತಿದೆ ಎಂಬ ಬಗ್ಗೆ ಡಿಸಿಎಂಗೆ ಮಾಹಿತಿ ಸಿಕ್ಕಿರಬಹುದು. ಅದರ ಬಗ್ಗೆ ಹೈಕಮಾಂಡ್‌ಗೆ ತಳಿಸುತ್ತೇವೆ. ಅವರು ಯಾವ ನಿರ್ಧಾರ ತೆಗೆದುಕೊಳ್ತಾರೆ ನೋಡೋಣ ಎಂದು ಹೇಳಿದ್ದಾರೆ.

ಹಣ ಯಾರಿಗೆ ಸಂಬಂಧಿಸಿದ್ದು?

ಐಟಿ ದಾಳಿ ವೇಳೆ ಸಿಕ್ಕ ಹಣ ಕಾಂಗ್ರೆಸ್‌ಗೆ ಸೇರಿದ್ದು ಎಂದು ಬಿಜೆಪಿ ಆರೋಪ ಮಾಡಿದೆ. ಐಟಿ ದಾಳಿ ನಡೆದಿದೆ. ಐಟಿಯವರು ಯಾರಿಗೆ ಸಂಬಂಧಿಸಿದ್ದು ಅಂತ ತಿಳಿಸುತ್ತಾರೆ. ಬಹುಶಃ ಇನ್ನೂ ತನಿಖೆ ಮಾಡ್ತಿರಬಹುದು. ಹಣ ಯಾರಿಗೆ ಸಂಬಂಧಿಸಿದ್ದು ಅಂತ ತಿಳಿಯಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

Exit mobile version