Site icon PowerTV

ಕುಮಾರಸ್ವಾಮಿಗೆ ನನ್ನದೊಂದು ಬಹಿರಂಗ ಸವಾಲ್ : ಪ್ರದೀಪ್ ಈಶ್ವರ್

ದೇವನಹಳ್ಳಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಹಿರಿಯರಿದ್ದಾರೆ. ಅವರಿಗೆ ನನ್ನದೊಂದು ಬಹಿರಂಗ ಸವಾಲ್ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿಮ್ಮನ್ನ ನಂಬಿ ಮೈನಾರಿಟಿಸ್, ಹಿಂದುಳಿದ ವರ್ಗದವರು ವೋಟ್ ಹಾಕಿದರಲ್ವಾ? ಅವರಿಗೆಲ್ಲಾ ದ್ರೋಹ ಮಾಡಿದ್ದೀರಾಲ್ವಾ? ಇದೇ ಬಿಜೆಪಿನಾ ಕೋಮುವಾದಿ ಅಂತ ಬೈದು ಬೈದು ಇದೀಗ ಯಾವ ಸಿದ್ಧಾಂತ ಇಟ್ಕೊಂಡು ಬಿಜೆಪಿ ಜೊತೆ ಸೇರಿದ್ದೀರಾ? ಎಂದು ಹೆಚ್​ಡಿಕೆಗೆ ಪ್ರಶ್ನೆ ಮಾಡಿದ್ದಾರೆ.

ನಿಮ್ಮ ರಾಜಕೀಯ ಹಿತಾಸಕ್ತಿಗೆ ಬಿಜೆಪಿ ಜೊತೆ ಸೇರಿದ್ದೀರಾ ಅಲ್ವಾ ಸಾರ್.. ಮೈನಾರಿಟಿ ವ್ಯಕ್ತಿನಾ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಮಾಡ್ತೀರಾ? ಅವರೆಲ್ಲಾ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೈನಾರಿಸ್​ಗೆ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಭರವಸೆ ಎಂದು ಚಾಟಿ ಬೀಸಿದ್ದಾರೆ.

Exit mobile version