Site icon PowerTV

ಅಶೋಕ್, ಲೂಟಿ ರವಿ, ನಕಲಿ ಸ್ವಾಮಿ ಇವರೇ ನಡುಗ್ತಿರೋದು : ಡಿ.ಕೆ ಶಿವಕುಮಾರ್

ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ನಡುಗ್ತಿದೆ ಎಂಬ ಮಾಜಿ ಸಚಿವ ಆರ್. ಅಶೋಕ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಡೆಗುತ್ತಿಲ್ಲ. ಬಿಜೆಪಿ ಹೈಕಮಾಂಡ್ ನಡಗುತ್ತಿದೆ. ಇದಕ್ಕೆಲ್ಲ ಅಡಿಪಾಯನೇ ಬಿಜೆಪಿಯ ಆರ್.ಅಶೋಕ್, ಲೂಟಿ ರವಿ, ನಕಲಿ ಸ್ವಾಮಿ, ಬ್ಲಾಕ್ ಮೇಲ್ ಸ್ವಾಮಿ ಇವರೆ ನಡುಗುತ್ತಿರೋದು ಎಂದು ಕುಟುಕಿದರು.

ಇವರ ಹೆಸರೆಲ್ಲ ಇದೆಯಂತೆ, ತನಿಖೆ ಆಗಲಿ. ಮೊದಲು ತನಿಖೆ ಆಗಬೇಕು. ಇವರ ಕಾಲದಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡಲಿ. ಈಗ ನಾವ್ಯಾಕೆ ಮಾತನಾಡಲಿಲ್ಲ ಗೊತ್ತಾ? ಐಟಿಯವರ ಬಳಿ ಇದ್ಯಲ್ಲಾ ಅವರು ಬಿಡಲಿ. ನಾವು ಆಮೇಲೆ ಮಾತನಾಡ್ತೇವೆ ಎಂದು ಟಕ್ಕರ್ ಕೊಟ್ಟರು.

ತನಿಖೆ ಆಗಬೇಕು, ತನಿಖೆ ಆಗಲಿ

ನಮ್ಮ ಲೀಡರ್ ಸಹ ಹೇಳಿದ್ದಾರೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ  ಇದೊಂದು ಫೌಂಡೇಶನ್. ನಾವು ಯಾಕೆ ಮಾತನಾಡಿಲ್ಲ ಅಂದ್ರೆ, Income Tax ನವರು ಒಂದು ಬುಲೆಟಿನ್ ಬಿಡಬೇಕಿತ್ತು ಆ ಬುಲೆಟಿನ್ ಬಿಟ್ಟಿದ್ದಾರೆ. ಈಗ ತನಿಖೆ ನಡೆಯಲಿ. ಅವರ ಹತ್ತಿರನೇ CBI, ED ಎಲ್ಲಾ ಇದೆಲ್ಲ ತನಿಖೆ ಮಾಡ್ಲಿ. ತನಿಖೆ ಆಗಬೇಕು, ತನಿಖೆ ಆಗಲಿ ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Exit mobile version