Site icon PowerTV

ಸ್ಕೂಟಿಯಲ್ಲಿ ಸವಾರಿ ಮಾಡಿದ ರಾಹುಲ್ ಗಾಂಧಿ

ಬೆಂಗಳೂರು : ಚುನಾವಣಾ ಪ್ರಚಾರದ ಅಂಗವಾಗಿ ಮಿಜೋರಾಂ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸ್ಕೂಟಿಯಲ್ಲಿ ಸವಾರಿ ಮಾಡಿದ್ದಾರೆ.

ಮಿಜೋರಾಂನ ಐಜ್ವಾಲ್​ ಕ್ಲಬ್​ಗೆ ರಾಹುಲ್ ಅವರು ಬೈಕ್​ನಲ್ಲೇ ತೆರಳಿದ್ದಾರೆ. ವ್ಯಕ್ತಿಯೊಬ್ಬರು ಸ್ಕೂಟಿ ಚಲಾಯಿಸುತ್ತಿದ್ದು, ಆತನ ಹಿಂದೆ ರಾಹುಲ್ ಗಾಂಧಿ ಹೆಲ್ಮೆಟ್ ಧರಿಸಿ ಕುಳಿತಿದ್ದರು.

ಇದೇ ವೇಳೆ ಐಜ್ವಾಲ್ ಕ್ಲಬ್​ನಲ್ಲಿ ರಾಹುಲ್ ಗಾಂಧಿ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಈಓ ಮಧ್ಯೆ ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರನ್ನು ಇಂದು ಕಾಂಗ್ರೆಸ್​ ಘೋಷಿಸಿದೆ.

ಬಿಜೆಪಿಯನ್ನು ಸೋಲಿಸುತ್ತೇವೆ

ನಾವು ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ. ತೆಲಂಗಾಣದಲ್ಲಿ ನಾವು ಬಿಜೆಪಿಯನ್ನು ಸೋಲಿಸುತ್ತೇವೆ. ನಾವು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ನಾಶ ಮಾಡುತ್ತೇವೆ. ಛತ್ತೀಸಗಡ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ಕಳೆದ ಬಾರಿ ರಾಜಸ್ಥಾನದಲ್ಲಿ ಬಿಜೆಪಿಯನ್ನು ಸೋಲಿಸಿದ್ದೆವು, ಈ ಬಾರಿ ಮತ್ತೊಮ್ಮೆ ಸೋಲಿಸುತ್ತೇವೆ. ನಾವು ಈಶಾನ್ಯದಲ್ಲೂ ಅದೇ ರೀತಿ ಮಾಡಲು ಯೋಜಿಸಿದ್ದೇವೆ. ಕಾಂಗ್ರೆಸ್ ಪಕ್ಷದ ವಿಚಾರವನ್ನು ಕೀಳಾಗಿ ಕಾಣಬೇಡಿ ಎಂದಿದ್ದಾರೆ.

ಅಮಿತ್ ಶಾ ಪುತ್ರ ಏನು ಮಾಡುತ್ತಾನೆ? ರಾಜನಾಥ್ ಸಿಂಗ್ ಅವರ ಮಗ ಏನು ಮಾಡುತ್ತಾನೆ? ಬಿಜೆಪಿಯ ನಾಯಕರನ್ನು ನೋಡಿ ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

Exit mobile version