Site icon PowerTV

ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ವಿದ್ಯಾರ್ಥಿಗಳು ಪ್ರೊಟೆಸ್ಟ್​!

ಬೆಂಗಳೂರು: ನಗರದ ಅರಣ್ಯ ಭವನದ ಮುಂದೆ ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ಮಾಡಿದ್ದಾರೆ.

310 ಅರಣ್ಯ ವೀಕ್ಷಕರ ನೇಮಕಾತಿ ಅಧಿಸೂಚನೆ ರದ್ದತಿಗೆ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ. ಈಗಿನ ನೋಟಿಫಿಕೇಷನ್ ಕೂಡಲೇ ರದ್ದು ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ನಿಲ್ಲಿಸಲಾಗಿತ್ತು ಈಗ ಪರ್ಸೆಂಟೇಜ್ ಆದಾರದಲ್ಲಿ ಆಯ್ಕೆ ಮಾಡ್ತಿದ್ದಾರೆ. ಇದನ್ನ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕು. SSLC ಅಂಕಗಳ ಮೇಲಿನ ಆಯ್ಕೆಗಳನ್ನ ರದ್ದುಪಡಿಸಿ ಎಲ್ಲಾ ಅರ್ಹರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿ, ಸರ್ಕಾರಿ ಕೆಲಸದ ಆಸೆಯಲ್ಲಿದ್ದ ವಿದ್ಯಾರ್ಥಿಗಳ ಆಸೆಗೆ ಅರಣ್ಯ ಇಲಾಖೆ ಮಣ್ಣು ಹಾಕಿದೆ. ಕೂಡಲೇ ಹೊಸ ಅಧಿಸೂಚನೆ ಹೊರಡಿಸಿ‌ ಪರೀಕ್ಷೆ‌ ನಡೆಸಿ ಅಂತಾ ವಿದ್ಯಾರ್ಥಿಗಳು ಆಗ್ರಹಿಸಿ, ಆಕ್ರೋಶ ಹೊರಹಾಕಿದ್ದಾರೆ.

Exit mobile version