Site icon PowerTV

ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್: ಬಿಜೆಪಿ ಪೋಸ್ಟರ್​​ ವೈರಲ್​

ಬೆಂಗಳೂರು: ಐಟಿ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಪೋಸ್ಟರ್ ರಿಲೀಸ್ ಮಾಡಿದ್ದು ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿದೆ.

ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಬಜೆಟ್ ಸೂಟ್‌ ಕೇಸ್ ಹಿಡಿದುಕೊಂಡ ಸಿದ್ದರಾಮಯ್ಯ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಮೊನ್ನೆ ಮೊನ್ನೆಯಷ್ಟೇ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ, ಮತ್ತವರ ಗಂಡ ಅಂಬಿಕಾಪತಿ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಮಂಚದ ಕೆಳಗೆ ಬಾಕ್ಸ್​ಗಳಲ್ಲಿ ತುಂಬಿಟ್ಟಿದ್ದ 40ಕೋಟಿ ರೂಪಾಯಿಯನ್ನ ಜಪ್ತಿಮಾಡಿಕೊಂಡು ಹೋಗಿದ್ದರು.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್

ಇದರ ಬೆನ್ನಲ್ಲೇ ಐಟಿ ಅಧಿಕಾರಿಗಳು ಬಿಲ್ಡರ್ ಸಂತೋಷ್ ಎನ್ನುವ ನಿವಾಸದ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ರಾಜಾಜಿನಗರದ ಅಪಾರ್ಟ್ಮೆಂಟ್​ನಲ್ಲಿ ಸಂತೋಷ್​ಗೆ ಸೇರಿದ ಫ್ಲ್ಯಾಟ್​ಮೇಲೆ ದಾಳಿ ಮಾಡಿ 40 ಕೋಟಿಗೂ ಅಧಿಕ ಹಣ ಹಣವನ್ನ ಜಪ್ತಿ ಮಾಡಿದ್ದರು.

ಇದನ್ನು ಆಧಾರವಾಗಿಟ್ಟುಕೊಂಡಿರುವ ಬಿಜೆಪಿ ಸಿದ್ದರಾಮಯ್ಯ ಕಲೆಕ್ಷನ್​ ಮಾಸ್ಟರ್​ ಎನ್ನುವ ಪೋಸ್ಟರ್​​ ರಿಲೀಸ್​ ಮಾಡಿದ್ದಾರೆ, ಸದ್ಯ ಈ ಪೋಸ್ಟರ್​​ ವೈರಲ್​ ಆಗಿದೆ.

Exit mobile version