Site icon PowerTV

ಅಂಬಿಕಾಪತಿ ಪರ ಬ್ಯಾಟ್​ ಬೀಸಿದ ಶಾಸಕ ಶಿವಲಿಂಗೇಗೌಡ!

ಹಾಸನ: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ ಕಂಟ್ರಾಕ್ಟರ್​ ಅಂಬಿಕಾಪತಿ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಕುರಿತು ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡು ಮೂರು ಕಂಟ್ರಾಕ್ಟರ್​ಗಳ ಮನೆಯಲ್ಲಿ ದುಡ್ಡು ಸಿಕ್ಕಿದೆ, ಅವರ ವಹಿವಾಟು ಎಷ್ಟು ಎಂದು ತಿಳ್ಕೊಂಡಿದ್ದೀರಾ, ಅಂಬಿಕಾಪತಿಯವರು ಇದುವರೆಗೆ ಎಷ್ಟು ಸಾವಿರ ಕಂಟ್ರ್ಯಾಕ್ಟ್​​ ಗಳನ್ನು ಮಾಡಿದ್ದಾರೆ ಗೊತ್ತಾ? ಅವರ ಮನೆಯಲ್ಲಿ 25 ಕೋಟಿ, 30 ಕೋಟಿ, 40 ಕೋಟಿ ಯಾವಾಗಲೂ ಇದ್ದೆ ಇರುತ್ತದೆ. ಅವರೆಲ್ಲಾ ಅಂತಹ ದೊಡ್ಡ ದೊಡ್ಡ ಕಂಟ್ರ್ಯಾಕ್ಟರ್​ ಗಳು ಎಂದರು.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ತಡೆ!

ಯಾವುದೇ ಕಂಟ್ರ್ಯಾಕ್ಟರ್​ಗಳಾಗಲಿ ಯಾವುದೇ ಪಾರ್ಟಿ ಇರಲಿ, ರೂಲಿಂಗ್ ಪಾರ್ಟಿ ಬಂದರೂ ರೂಲಿಂಗ್ ಪಾರ್ಟಿ ಜೊತೆ ಚೆನ್ನಾಗಿ ಇರ್ತಾರೆ, ಈಗ ಸಿಕ್ಕಿರುವ ಹಣಕ್ಕೆ ದಾಖಲಾತಿಗಳು ಇಲ್ಲ ಅಂದ್ರೆ ಕೊಡ್ತಾನೆ, ಇಲ್ಲಾಂದ್ರೆ ಪೆನಾಲ್ಟಿ ಕಟ್ಟುತ್ತಾನೆ ಅದಕ್ಕೆ ಯಾರೋ ಮಾಡಿಬಿಟ್ಟಿದ್ದಾರೆ, ದುಡ್ಡು ಹೊಡೆದು ಬಿಟ್ಟಿದ್ದಾನೆ ಅಂತ ಹೇಳೋದು ಸರಿಯಲ್ಲ ಎಂದು ಅವರು ಹೇಳಿದರು.

Exit mobile version