Site icon PowerTV

ಬಿಜೆಪಿ ನಾಯಕರು ನೂರಕ್ಕೆ ನೂರರಷ್ಟು ಸತ್ಯ ಹರಿಶ್ಚಂದ್ರರಾ? : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಕೇಂದ್ರ ಸರ್ಕಾರ ಬಂದ ಮೇಲೆ ಎಷ್ಟು IT ರೇಡ್ ಆಗಿದೆ. ಅದನ್ನು ಇಲ್ಲಿವರೆಗೂ ಬಹಿರಂಗ ಮಾಡಿಲ್ಲ. ನಾಲ್ಕು ದಿನ ಸುದ್ದಿಯಾಗತ್ತೆ, ಮುಂದೆ ಏನು? ಕೊನೆಯ ರಿಜಲ್ಟ್ ಏನು ಅದು, ಯಾರಿಗೆ ದಂಡ ಹಾಕೀರಿ. ಇದನ್ನು ಬಹಿರಂಗ ಮಾಡ್ತೀರಾ? ಎಂದು ಬಿಜೆಪಿಗರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಹದಗೆಟ್ಟು ಹೋಗಿದೆ. ಚುನಾವಣೆಯಲ್ಲಿ ಹಣ ಖರ್ಚು ಮಾಡ್ತೀರಿ. ನಿಮಗೆ ಆತ್ಮಸಾಕ್ಷಿ ಇದ್ರೆ ಹೇಳಿ. ಚುನಾವಣೆಗೆ ಹಣ ಖರ್ಚು ಮಾಡಿಲ್ವಾ? ನನಗೆ CBI ತನಿಖೆ ಮಾಡಬೇಕ ಅಂತಾರೆ. ನಮಗೆ ಇದು ಅರ್ಥ ಆಗ್ತಿಲ್ಲ. ನೀವೇನು 100ಕ್ಕೆ 100ರಷ್ಟು ಸತ್ಯ ಹರಿಶ್ಚಂದ್ರರಾ? ಎಂದು ಕಿಡಿಕಾರಿದರು.

ಪಂಚರಾಜ್ಯ ಚುನಾವಣೆ, ಲೋಕಸಭಾ ಚುನಾವಣೆಗೆ 1,000 ಕೋಟಿ ಸಂಗ್ರಹ ಮಾಡ್ತೀದಾರೆ ಅನ್ನೋ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಜೋಶಿ ಅವರು ಬಹಳ ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಐಟಿ ರೇಡ್ ಇದೆಲ್ಲ ಮೋದಿ ಅವರ ಕೈಯಲ್ಲಿದೆ. ಜೋಶಿ ಅವರು ಇಂತಹ ಗಂಭೀರ ಆರೋಪ ಮಾಡಿದ್ದಾರೆ. ಇದು ಜೋಶಿ ಅವರಿಗೆ ಶೋಭೆ ತರುವಂತದಲ್ಲ. ಇದು ಬಹಳ ಸೂಕ್ಷ್ಮ ವಿಚಾರ,ಇದಕ್ಕೆ ಎವಿಡೆನ್ಸ್ ಏನಿದೆ? ರಾಜಕೀಯ ವ್ಯವಸ್ಥೆ ಕುಲಗೆಟ್ಟು ಹೋಗಿದೆ ಎಂದು ಚಾಟಿ ಬೀಸಿದರು.

ಸ್ವ ಇಚ್ಛೆಯಿಂದ ನನ್ನ ಸಂಪರ್ಕ ಮಾಡ್ತಿದ್ದಾರೆ

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಂಗ್ರೆಸ್​ ಪಕ್ಷಕ್ಕೆ ಬರಲಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿ, ನಾನು ಯಾರನ್ನು ಕರೀತಿಲ್ಲ, ಅವರೇ ಸ್ವ ಇಚ್ಛೆಯಿಂದ ನನ್ನ ಸಂಪರ್ಕ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Exit mobile version