Site icon PowerTV

ನಾನು ಕುರುಬ ಜಾತಿಯಲ್ಲಿ ಹುಟ್ಟಿರೋದು ಆಕಸ್ಮಿಕ : ಸಿದ್ದರಾಮಯ್ಯ

ಮೈಸೂರು : ನಾನು ಕುರುಬ ಜಾತಿಯಲ್ಲಿ ಹುಟ್ಟಿರೋದು ಆಕಸ್ಮಿಕ. ನಿಮಗೆ ಹೆಮ್ಮೆ ಏನು ಅಂದ್ರೆ ನಮ್ಮ‌ ಜಾತಿಯವನು ಸಿಎಂ ಆದ ಅಂತ. ನಾನು ಜಾತ್ಯಾತೀತವಾಗಿ ಕೆಲಸ ಮಾಡ್ತೀನಿ. ಎಲ್ಲಾ ಸಮೂದಾಯಕ್ಕೂ ನಾನು ಗೌರವ ಕೊಡ್ತೀನಿ. ಸಮಾಜದಲ್ಲಿ ನೊಂದ ಸಮಾಜಗಳಿಗೆ ನ್ಯಾಯ ಕೊಡಲು ಪ್ರಯತ್ನ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಕನಕ ಭವನದಲ್ಲಿ ಹಮ್ಮಕೊಂಡಿದ್ದ ಕಾಗಿನೆಲೆ ಮಹಾಸಂಸ್ಥಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜಕೀಯಕ್ಕೆ ಬಂದು 50ಕ್ಕೂ ಹೆಚ್ಚು ವರ್ಷ ಆಯ್ತು ಎಂದರು.

1973ರಲ್ಲಿ ನಾನು ರಾಜಕೀಯಕ್ಕೆ ಬಂದೆ. ಮೊದಲು ಜನತಾ ಪಾರ್ಟಿಯಲ್ಲಿ‌ ಇದ್ದೆ. ಆ ಮೇಲೆ ಜೆಡಿಯುನಲ್ಲಿ‌ ಇದ್ದೆ, ಬಳಿಕ ಅದು ಜೆಡಿಎಸ್ ಆಯ್ತು. ನನ್ನ ಜೆಡಿಎಸ್‌‌ನಿಂದ ತೆಗೆದು ಹಾಕಿ ಬಿಟ್ರು. ದೇವೇಗೌಡ 2005ರಲ್ಲಿ ಜೆಡಿಎಸ್‌‌ನಿಂದ ಉಚ್ಛಾಟನೆ ಮಾಡಿದ್ರು. ಆ ಬಳಿಕ ನಾನು ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಯಿತು. ಈಗ ನಾನು ಜನರ ಆಶೀರ್ವಾದದಿಂದ ಎರಡನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.

Exit mobile version