Site icon PowerTV

ಬಿಲ್ಡರ್​ ಮನೆಯ ಮೇಲೆ ಐಟಿ ದಾಳಿ: 45 ಕೋಟಿ ಹಣ ಪತ್ತೆ!

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಕರ ಮನೆಗಳ ಮೇಲೆ ದಾಳಿ ಮುಂದುವರೆಸಿದ್ದು ದಾಳಿ ವೇಳೆ ಕೋಟಿ ಕೋಟಿ ಹಣವನ್ನು ಪತ್ತೆ ಹಚ್ಚಿದ್ದಾರೆ.

ನಗರದ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿ ಅಪಾರ್ಟ್‌ಮೆಂಟ್‌ನ 3ನೇ ಮಹಡಿಯಲ್ಲಿನ ಪ್ಲ್ಯಾಟ್ ಮೇಲೆ ದಾಳಿ ನಡೆಸಿದ್ದಾರೆ. ಮೂರು ಕಾರುಗಳಗಳಲ್ಲಿ ಬಂದ ಆದಾಯ ತೆರೆಗೆ ಇಲಾಖೆಯ ಅಧಿಕಾರಿಗಳು ಮನೆಮೇಲೆ ದಾಳಿ ನಡೆಸಿ ನಿನ್ನೆ ಮಧ್ಯಾಹ್ನದಿಂದ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ!

ಬಿಲ್ಡರ್​ ಕಂ ಡೆವೆಲಪರ್​ ಆಗಿರುವ ಸಂತೋಷ್‌ ಕೃಷ್ಣಪ್ಪ ಅನ್ನೋರಿಗೆ ಸೇರಿದ ಫ್ಲ್ಯಾಟ್ ಇದಾಗಿದ್ದು ದಾಳಿ ವೇಳೆ 32 ಬಾಕ್ಸ್‌ನಲ್ಲಿ 45 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿದೆ. ವಿಚಾರಣೆ ವೇಳೆ ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ಬೆಮೆಲ್‌ ಕಾಂಜರಾಜುಗೆ ಸೇರಿದ್ದು? ಎಂಬ ಮಹತ್ವದ ಮಾಹಿತಿ ಬಯಲಿಗೆ ಬಂದಿದೆ.

Exit mobile version