Site icon PowerTV

ಸತ್ಯ ಹರಿಶ್ಚಂದ್ರ ಎನ್ನುವ ರೀತಿ ಫೋಸ್ ಕೊಟ್ಟಿದ್ರು : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಕರಾಳ ಮುಖ ಹೊರ ಬಂದಿದೆ. ಸತ್ಯ ಹರಿಶ್ಚಂದ್ರ ಅನ್ನೋ ಫೋಸ್ ಕೊಟ್ಟಿದ್ರು. ಕಾಂಗ್ರೆಸ್ ಕೈವಾಡ ಇರೋದು ಸ್ಪಷ್ಟವಾಗಿದೆ. ಕಾಂಗ್ರೆಸ್ ‌ನೈತಿಕ‌ ಅದಃಪತನಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಲ್ಲ ಅದು, ಕಾಂಗ್ರೆಸ್ ಕಮೀಷನ್ ಸರ್ಕಾರ. ಜನರ ಬಗ್ಗೆ ಅರಿವಿಲ್ಲ, ಕಾಳಜಿ ಇಲ್ಲ ಎಂದು ಲೇವಡಿ ಮಾಡಿದರು.

ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದವರು ಇದರಲ್ಲಿ ಇದಾರೆ. ಈ ರೇಡ್ ಹಿಂದೆ ಮನಿ ಲಾಂಡ್ರಿಂಗ್ ನಡದಿರೋ ಅನುಮಾನ ಇದೆ. ಕಾಂಗ್ರೆಸ್ ಮುಖಂಡರೇ ಇದರಲ್ಲಿ ಇರೋದು ಎಲ್ಲರಿಗೂ ಗೊತ್ತು. ಕಾನೂನಿನ ವಿರುದ್ದ ಇರೋದು ಕಾಂಗ್ರೆಸ್ ಪಾರ್ಟಿ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ. ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ, ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ. ಸಂತೋಷ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಮುಖಂಡರ ದುಡ್ಡು ಎಂದು ಗಂಭೀರ ಆರೋಪ ಮಾಡಿದರು.

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್

ಮೊದಲನೇ ದುಡ್ಡು ಕಾಂಗ್ರೆಸ್ ನ ಬ್ರಷ್ಟಾಚಾರ ಹಣ ಅನ್ನೋದು ಜನಜನಿತ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಇದು ಇಲ್ಲಿವರೆಗೂ ಆಗಿರೋದು ಮುಂದೆ ಏನೇನ ಆಗತ್ತೋ ನೋಡಬೇಕು. ಇದು ಕಮಿಷನ್ ಹಣ ಅನ್ನೋ ಆರೋಪ ಇದೆ. ಇದರ ಸಮಗ್ರ ತನಿಖೆ ಆಗಬೇಕು. ಸಿಬಿಐ ಈಡಿ ಸಮಗ್ರ ತನಿಖೆ ಆಗಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದರು.

Exit mobile version