Site icon PowerTV

ಪಾಕಿಸ್ತಾನದ ಮೇಲೆ ಯೋಧರಂತೆ ಹೋರಾಡುತ್ತಾರೆ : ರೇಣುಕಾಚಾರ್ಯ

ದಾವಣಗೆರೆ : ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಪಂದ್ಯದ ಬಗ್ಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಭಾರತ ಗೆದ್ದು ಬರಲಿ ಎಂದು ಶುಭಾಶಯ ಕೋರಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಾಕಿಸ್ತಾನದ ಮೇಲೆ ಭಾರತ ತಂಡದ ಆಟಗಾರರು ಯೋಧರಂತೆ ಆಟವಾಡುತ್ತಾರೆ. ಇವತ್ತು ನಡೆಯುವ ಕ್ರಿಕೆಟ್​ ಪಂದ್ಯದಲ್ಲಿ ನಮ್ಮ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಯಾವ ರೀತಿ ಯೋಧರು ಶತ್ರಗಳ ವಿರುದ್ಧ ಯುದ್ಧ ಮಾಡ್ತಾರೋ ಅದೇ ರೀತಿ ಕ್ರಿಕೆಟ್ ಆಡ್ತಾರೆ. ಏಷ್ಯಕಪ್​ನಲ್ಲಿ ಹೇಗೆ ಗೆದ್ದರೋ ಅದೇ ರೀತಿ ವಿಶ್ವಕಪ್ ಗೆಲ್ಲುತ್ತಾರೆ. ತುಂಬಾ ವಿಶ್ವಾಸ ಇದೆ, ನಮ್ಮ ಭಾರತ ತಂಡ ಗೆಲ್ಲುತ್ತದೆ. ಅದರಲ್ಲೂ ಪಾಕಿಸ್ತಾನದ ಮೇಲೆ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ತಿಳಿಸಿದ್ದಾರೆ.

ಆಟೋ ಚಾಲಕರಿಂದ ವಿಶೇಷ ಪೂಜೆ

ಭಾರತ ಹಾಗೂ ಪಾಕಿಸ್ತಾನದ ನಡುವೆ ಇಂದು ಗುಜರಾತಿನ ಅಹಮದಾಬಾದಿನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ನಡುವೆ ರಾಜ್ಯ ಆಟೋ ಚಾಲಕರು, ಮಾಲೀಕರ ಸಂಘದ ಪದಾಧಿಕಾರಿಗಳು ಭಾರತ ತಂಡವೇ ಗೆಲ್ಲಬೇಕು ಎಂದು ಕೋರಿ ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

Exit mobile version