Site icon PowerTV

ಕಾಮಗಾರಿ ಬಾಕಿ ಹಣ ಶೀಘ್ರವೇ ಬಿಡುಗಡೆ ಭರವಸೆ ನೀಡಿದ್ದಾರೆ: ಕೆಂಪಣ್ಣ

ಬೆಂಗಳೂರು : ಕಾಮಗಾರಿಗಳ ಬಾಕಿ ಹಣ ಕಳೆದ ಐದೂವರೆ ತಿಂಗಳಿಂದ ಆಗಿರಲ್ಲ ಅದರ ಬಗ್ಗೆ ಸಿಎಂ ಜೊತೆ ಇಂದು ಚರ್ಚೆ ಮಾಡಿದ್ದೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಕಿ ಹಣ ಬಿಡುಗಡೆ ಕುರಿತು ಇಂದು ಸಿಎಂ ಜೊತೆ ಮಾತನಾಡಿದ್ದೇವೆ  ಬಾಕಿ ಹಣ ಅದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಏನಾದರೂ ಸಮಸ್ಯೆ ಇದ್ರೆ ಬನ್ನಿ ಎಂದು ಹೇಳಿದ್ದಾರೆ. ನ್ಯಾಯಯುತವಾದ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೊ.ಭಗವಾನ್ ಬಂಧನಕ್ಕೆ ಆಗ್ರಹ : ಶಾಸಕ ಅಶ್ವತ್ಥ್​ನಾರಾಯಣ

ಹಣ ಬಿಡುಗಡೆ ವಿಚಾರವಾಗಿ ಅಧಿಕಾರಿಗಳು ಇಂಜಿನಿಯರ್ ಮತ್ತು ಬಿಬಿಎಂಪಿ ಕಮಿಷನರ್ ಹಣ ಕೇಳುತ್ತಿದ್ದು ಹಿಂಸೆ ಕೊಡ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಜೊತೆ ಮನವಿ ಮಾಡಿಕೊಂಡಿದ್ದೇವೆ. ಈ ಸಮಸ್ಯೆ ಸಂಬಂಧ ಅವರನ್ನ ಕರೆದು ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

Exit mobile version