Site icon PowerTV

ದಸರಾಗೆ ಹೆಚ್ಚುವರಿ ಬಸ್​ಗಳ ನಿಯೋಜನೆ!

ಮೈಸೂರು : ದಸರಾ ಹಬ್ಬದ ಹಿನ್ನೆಲೆ‌ KSRTCಯಿಂದ ಹೆಚ್ಚುವರಿ 2000 ಹೆಚ್ಚುವರಿ ಬಸ್​​ಗಳನ್ನ ಸಾರಿಗೆ ನಿಗಮ ನಿಯೋಜಿಸಿದೆ.

ಕೆಂಪೇಗೌಡ, ಮೈಸೂರು ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ ಸೇವೆಗಳನ್ನ ಒದಗಿಸಲಾಗಿದೆ. ಜೊತೆಗೆ ಮಂಗಳೂರು, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಗೋಕರ್ಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ‌ ಹೆಚ್ಚುವರಿ ಬಸ್ ಸೇವೆಗಳನ್ನ ನೀಡಲಾಗುತ್ತದೆ. ಚೆನ್ನೈ, ಊಟಿ, ಕೊಡೈಕನಾಲ್, ಮಧುರೈ, ಪಣಜಿ ಸೇರಿದ ಅಂತರ್ ರಾಜ್ಯದಿಂದಲೂ ಹೆಚ್ಚುವರಿ ಬಸ್​ಗಳನ್ನ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: WorldCup- 2023: ಇಂದು ಭಾರತ V/S ಪಾಕಿಸ್ತಾನ ಮುಖಾಮುಖಿ!

ಜೊತೆಗೆ ಒಂದೇ ಬಾರಿಗೆ 4ಕ್ಕಿಂತ ಹೆಚ್ಚಿನ ಟಿಕೆಟ್ ಖರೀದಿಸಿದರೆ 5% ರಿಯಾಯಿತಿ ನೀಡಲಾಗುತ್ತದೆ. ಹೋಗುವ & ಬರುವ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ 10% ರಿಯಾಯಿತಿ ನೀಡುವುದಾಗಿ KSRTC ತಿಳಿಸಿದೆ. ಅಕ್ಟೋಬರ್ 20ರಿಂದ 26ರವರೆಗೆ ನಿಗಮದಿಂದ ಹೆಚ್ಚುವರಿ ಬಸ್ ಸೇವೆಗಳು ಕಾರ್ಯಾಚರಣೆ ನಡೆಸಲಿವೆ.

Exit mobile version