Site icon PowerTV

ಮೋದಿಗೆ ರಾಖಿ ಕಟ್ಟಿದ ಮೆಕ್ಸಿಕನ್​ ಸೆನೆಟ್ ಅಧ್ಯಕ್ಷೆ!

ದೆಹಲಿ: ಜಿ20 ಸಂಸದೀಯ ಸ್ಪೀಕರ್​ಗಳ ಶೃಂಗಸಭೆಯಲ್ಲಿ ಮೆಕ್ಸಕನ್​​ ಸೆನೆಟ್ ಅಧ್ಯಕ್ಷೆ ಅನಾ ಲಿಲಿಯಾ ರಿವೆರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ್ದಾರೆ. ಈ ವೇಳೆ ಅನಾ ಲಿಲಿಯಾ ರಿವೆರಾ ಅವರ ತಲೆ ಮೇಲೆ ಕೈ ಇಟ್ಟು ಪ್ರಧಾನಿ ಮೋದಿ ಆರ್ಶಿವಾದ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದೆ. ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಪಿ20 ಸಮ್ಮೇಳನದಲ್ಲಿ ಭಾಗವಹಿಸಲು ಅನಾ ಲಿಲಿಯಾ ರಿವೆರಾ ಅವರು ಭಾರತಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: WorldCup- 2023: ಇಂದು ಭಾರತ V/S ಪಾಕಿಸ್ತಾನ ಮುಖಾಮುಖಿ!

ಪ್ರಧಾನಿ ನರೇಂದ್ರ ಮೋದಿ ಇಂದು ಜಿ20 ಸಂಸದೀಯ ಸ್ಪೀಕರ್​ಗಳ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ್ದು, ಜಾಗತಿಕ ಭಯೋತ್ಪಾದನೆಯಿಂದ ಹಿಡಿದು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಯವರೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಇಂದು ನಾವು ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ ಎಂದು ಪ್ರಧಾನಿ ಮೋದಿ ಎಲ್ಲಾ ಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

Exit mobile version