Site icon PowerTV

ಹಮಾಸ್ ವಾಯುಪಡೆ ಮುಖ್ಯಸ್ಥ ಅಬು ಮುರಾದ್‌ ಹತ್ಯೆ

ಬೆಂಗಳೂರು : ಹಮಾಸ್ ಬಂಡುಕೋರರ ಗುಂಪಿನ ಹಿರಿಯ ಸದಸ್ಯ, ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ ಅಬು ಮುರಾದ್‌ನನ್ನು ಇಸ್ರೇಲ್ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಶನಿವಾರ ಬೆಳಗ್ಗಿನ ಜಾವ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಾಯುಸೇನೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿತು. ದಾಳಿಯು ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯಲ್ಲಿ ಅಬು ಮುರಾದ್‌ನನ್ನು ಹತ್ಯೆಗೈಯಲಾಗಿದೆ ಎಂದು ವರದಿ ಮಾಡಿದೆ.

ಅಬು ಮುರಾದ್ ಕಳೆದ ಶನಿವಾರ ನಡೆದ ರಾಕೆಟ್ ದಾಳಿ ಮತ್ತು ಇಸ್ರೇಲಿ ಪ್ರಜೆಗಳ ಹತ್ಯಾಕಾಂಡದ ಸಮಯದಲ್ಲಿ ಬಂಡುಕೋರರನ್ನು ನಿರ್ದೇಶಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಅಕ್ಟೋಬರ್ 7ರಂದು ಇಸ್ರೇಲ್‌ಗೆ ಒಳನುಸುಳುವಿಕೆಗೆ ಕಾರಣವಾದ ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಹತ್ತಾರು ಸೈಟ್‌ಗಳನ್ನು ಪ್ರತ್ಯೇಕ ದಾಳಿಗಳಲ್ಲಿ ಹೊಡೆದಿದೆ ಎಂದು ಐಡಿಎಫ್ ಹೇಳಿದೆ.

Exit mobile version