Site icon PowerTV

ಶ್ರೀರಂಗಪಟ್ಟಣಕ್ಕೆ ತೆರಳಿದ್ದ ದಂಪತಿ ಅಪಘಾತದಲ್ಲಿ ದುರ್ಮರಣ!

ರಾಮನಗರ : ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಕಾರಿನಲ್ಲಿದ್ದ ದಂಪತಿಗಳು ಸಾವಿಗೀಡಾಗಿರುವ ಘಟನೆ ನಡೆದಿದೆ.

ರಾಜೇಶ್‌ ಹಾಗೂ ಪತ್ನಿ ಸುಮಾ  ಮೃತ ದುರ್ದೈವಿಗಳು, ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನ ಪೀಣ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮೆಕ್ಸಿಕನ್​ ಸೆನೆಟ್ ಅಧ್ಯಕ್ಷೆ! 

ಇಂದು ಮುಂಜಾನೆ ಪ್ರಸಿದ್ದ ಶ್ರೀರಂಗಪಟ್ಟಣದ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬ ಮಾರ್ಗ ಮಧ್ಯೆ ಲಾರಿಯನ್ನು ಓವರ್ ಟೇಕ್‌ ಮಾಡಲು ಹೋಗಿ ಅಪಘಾತ ಲಾರಿ ಹಿಂಬದಿಗಿ ಭಲವಾಗಿ ಗುದ್ದಿದ ಪರಿಣಾಮ ಕಾರಿನ ಮುಂದಿನ ಸೀಟ್​ನಲ್ಲಿ ಕುಳಿತಿದ್ದ ಗಂಡ ಹೆಂಡತಿ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತ ಹಿನ್ನೆಲೆ ಮೈಸೂರು ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version