Site icon PowerTV

ಮಹಿಷಾಸುರನ ಪ್ರತಿಮೆಗೆ ಪೂಜೆ, ನಿಷೇಧಾಜ್ಞೆ ನಡುವೆ ಬೈಕ್ ರ್ಯಾಲಿ

ಮೈಸೂರು : ನಾಡಹಬ್ಬ ಮೈಸೂರು ದಸರಾ ಎಂದಿಗಿಂತ ಈ ಬಾರಿ ಮಹತ್ವ ಪಡೆದಿದೆ. ಈ ಬಾರಿ ಪ್ರಗತಿಪರರಿಂದ ನಡೆಯುತ್ತಿರುವ ಮಹಿಷಾ ದಸರಾ ಹಿನ್ನೆಲೆ ಭಾರೀ ಕುತೂಹಲ ಕೆರಳಿಸಿದೆ. ಇಂದು ಮಹಿಷಾ ದಸರಾ ಹಿನ್ನೆಲೆ ಮಂಡ್ಯದಲ್ಲಿ ಮಹಿಷಾಸುರನ ಪ್ರತಿಮೆಗೆ ಪೂಜೆ ಸಲ್ಲಿಸಲಾಗಿದೆ.

ಸಮಾನ‌ ಮನಸ್ಕಾರ ಕಾರ್ಯಕರ್ತರಿಂದ ಪೂಜೆ ಸಲ್ಲಿಸಲಾಗಿದೆ. ಮಂಡ್ಯ ತಾಲೂಕಿನ ‌ಮಂಗಲ ಗ್ರಾಮದಲ್ಲಿರುವ ಮಹಿಷಾಸುರನಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ.

ಮಹಿಷ ದಸರಾ ಹಿನ್ನಲೆ ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ನಡುವೆಯು ಬೈಕ್ ರ್ಯಾಲಿ ಮಾಡಿದ್ದಾರೆ. ಅಶೋಕಪುರಂ ಅಂಬೇಡ್ಕರ್ ಪಾರ್ಕ್​​​ನಿಂದ ಟೌನ್ ಹಾಲ್​​ವರೆಗೂ ಬೈಕ್ ರ್ಯಾಲಿ ನಡೆಸಿದ್ದಾರೆ. ನೂರಾರು ಬೈಕ್​​ಗಳ ಮೂಲಕ ಬೈಕ್ ರ್ಯಾಲಿ ನಡೆಸಿದ್ದಾರೆ.

ಬೈಕ್ ರ್ಯಾಲಿ ಮಾಡುತ್ತ ಜೈಕಾರ

ಬೈಕ್ ರ್ಯಾಲಿಗೂ ಮುನ್ನವೇ ಧ್ವನಿವರ್ಧಕದ ಮೂಲಕ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಷೇಧಾಜ್ಞೆಗೆ ಕ್ಯಾರೆ ಎನ್ನದೇ ಬೈಕ್ ರ್ಯಾಲಿ ಹೊರಟಿದ್ದಾರೆ. ಬೈಕ್ ರ್ಯಾಲಿ ತಡೆಯುವ ಕನಿಷ್ಠ ಕೆಲಸಕ್ಕೂ ಖಾಕಿಪಡೆ ಮುಂದಾಗಿಲ್ಲ. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡುತ್ತ ಜೈಕಾರ ಹಾಕಿದ್ದಾರೆ. ದಲಿತಪರ ಸಂಘಟನೆ ಕಾರ್ಯಕರ್ತರು ರ್ಯಾಲಿ ನಡೆಸಿದ್ದಾರೆ.

Exit mobile version