Site icon PowerTV

ಗಂಗಾಜಲ ಮೇಲೆ ಯಾವುದೇ GST ಇಲ್ಲ!

ದೆಹಲಿ : ಕೇಂದ್ರ ಹಣಕಾಸು ಸಚಿವಾಲಯ ಕಂದಾಯ ವಿಭಾಗ, ಗಂಗಾಜಲ, ಪೂಜಾ ಸಾಮಗ್ರಿಗಳಿಗೆ GST ವಿನಾಯಿತಿ ಪಟ್ಟಿಯಲ್ಲಿವೆ ಎಂದು ಹೇಳಿದೆ.

ಗಂಗಾ ಜಲ, ಕುಂಕುಮ, ಸಿಂದೂರ, ಕೈಬಳೆ ಇತ್ಯಾದಿಗಳಿಗೆ GST ತೆರಿಗೆ ಇರುವುದಿಲ್ಲ ಎಂದು CBIC ಹೇಳಿದೆ. 2017ರಲ್ಲಿ ನಡೆದ 14 ಮತ್ತು 15ನೇ GST ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ GST ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚಿಸಲಾಗಿದೆ. ಇವುಗಳನ್ನು GST ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ಇಸ್ರೇಲ್​​​ನಿಂದ ದೆಹಲಿಗೆ ಬಂದಿಳಿದ​ 212 ಭಾರತೀಯರು

GST ಜಾರಿಗೆ ಬಂದಾಗಿನಿಂದಲೂ ಈ ಐಟಂಗಳಿಗೆ GST ಇಲ್ಲ, ಎಂದು CBIC ಹೇಳಿದೆ. ಗಂಗಾಜಲಕ್ಕೆ 18% GST ವಿಧಿಸುವ ಸರ್ಕಾರ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನು ಗಮನಿಸಿದ ನಂತರ CBIC ಈ ಸ್ಪಷ್ಟೀಕರಣವನ್ನು ನೀಡಿದೆ.

Exit mobile version