Site icon PowerTV

ಹಿಂದೂ ಧರ್ಮದಲ್ಲಿ ಶೂದ್ರ ಎಂದರೆ ಸೂಳೆ ಮಗ ಅಂತ : ಪ್ರೊ.ಕೆ.ಎಸ್. ಭಗವಾನ್

ಮೈಸೂರು : ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲು ಎಂದು‌ ತಿಳಿದಿದ್ದಾರೆ. ಇಂತಹ ಧರ್ಮ ನಮಗೆ ಬೇಕಿಲ್ಲ. ಹಿಂದೂ ಧರ್ಮದಲ್ಲಿ ಶೂದ್ರ ಎಂದರೆ ಸೂಳೆ ಮಗ ಅಂತ. ಇಂತಹ ಧರ್ಮ ನಮಗೆ ಬೇಡ ಎಂದು ಚಿಂತಕ ಪ್ರೊ. ಕೆ.ಎಸ್. ಭಗವಾನ್ ಹೇಳಿದರು.

ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಮಹಿಷ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಧರ್ಮ ನಮ್ಮ‌ ಧರ್ಮ ಅಲ್ಲ.. ನಮ್ಮ ಧರ್ಮ ಬೌದ್ಧ ಧರ್ಮ ಎಂದರು.

ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡ್ತಾ ಇದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಬ್ರಾಹ್ಮಣರು, ವೈದಿಕರು ಬೇರೆ ದೇಶದಿಂದ ಬಂದಿರೋರು. 2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ ಎಂದು ಹೇಳಿದರು.

ನಿಜ ಹೇಳಿಯೇ ಸಾಯಬೇಕು

ಒಕ್ಕಲಿಗರು ಸಂಸ್ಕೃತಿ ಹೀನರು‌. ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು. ನಾನು ಹೇಳಿದ್ರೆ ನನ್ನ ಹೊಡೆಯೋಕೆ ಬರ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೆ, ನಿಜ ಹೇಳಿಯೇ ಸಾಯಬೇಕು. ಎಲ್ಲರೂ ದೇವರ ಬಗ್ಗೆ ದೊಡ್ಡ ಚಿಂತೆ ಮಾಡ್ತಾರೆ. ದೇವರು ಯಾಕೆ ಕೊರೋನಾ ತಡೆಯಲಿಲ್ಲ. ದೇವಸ್ಥಾನದಲ್ಲಿ ಕಳ್ಳತನವಾಗುವುದನ್ನು ದೇವರು ಯಾಕೆ ತಡೆಯಲಿಲ್ಲ. ದೇವರೆ ಕಳ್ಳನಾಗಿದ್ದಾನೋ ಏನೋ? ಎಂದು ಪ್ರಶ್ನಿಸಿದರು.

Exit mobile version