Site icon PowerTV

ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಅಮಾನತು

ಬೆಂಗಳೂರು : ಕರ್ತವ್ಯ ಲೋಪ ಹಿನ್ನಲೆಯಲ್ಲಿ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

ಒಂದು ವಾರದಲ್ಲಿ ಆನೇಕಲ್​​​ನ ಇಬ್ಬರು ತಹಶೀಲ್ದಾರ್​​​ಗಳನ್ನ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಮತ್ತು ಉಚ್ಚ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅಮಾನತು ಮಾಡಲಾಗಿದೆ.

2021ರಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಆಗಿದ್ದ ವೇಳೆ ದೇವಾಲಯದ ಮಳಿಗೆಗಳ ವಿಚಾರವಾಗಿ ಕಂದಾಯ ಇಲಾಖೆ ಹಾಗೂ ದೇವಾಲಯದ ಕಮಿಟಿ ನಡುವೆ ವಾದ ವಿವಾದಗಳು ನಡೆಯುತ್ತಿತ್ತು. ಬೇಗೂರು ಗ್ರಾಮದ ಶ್ರೀ ಸ್ಪೂರ್ತಿ ವಿನಾಯಕ ಹಾಗೂ ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯದ ಸಮಿತಿ ಪರವಾಗಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.

ತಹಶೀಲ್ದಾರ್ ಶಿವಪ್ಪ ಲಮಾಣಿ ವಿರುದ್ಧ ಒಂದು ಲಕ್ಷ ದಂಡ ವಿಧಿಸಿ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಮುಖೇನ ದೋಷಾರೋಪಣ ಪಟ್ಟಿಯನ್ನು ತಹಶೀಲ್ದಾರ್ ಶಿವಪ್ಪ ಲಮಾಣಿ ಸ್ವೀಕರಿಸಿದ ಹಿನ್ನಲೆ ರಾಜ್ಯ ಸರ್ಕಾರ ಅಮಾನತು ಮಾಡಿದೆ.

Exit mobile version