Site icon PowerTV

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ : ಶಾಸಕ ಯತ್ನಾಳ್

ವಿಜಯಪುರ : ಐಟಿ ದಾಳಿ ವೇಳೆ ಕಾಂಗ್ರೆಸ್ ನಾಯಕಿಯ ಪತಿ ಮನೆಯಲ್ಲಿ ಪತ್ತೆಯಾಗಿರುವ 42 ಕೋಟಿ  ಹಣದ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಲೇವಡಿ ಮಾಡಿದ್ದಾರೆ.

ಈ ಕುರಿತು ‘ಎಕ್ಸ್​’ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ! ಮಹದೇವಪ್ಪನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು ಎಂದು ಟೀಕಿಸಿದ್ದಾರೆ.

1/4ರಷ್ಟು  ರಾಜಸ್ಥಾನಕ್ಕೆ, 1/4ರಷ್ಟು ಮಧ್ಯಪ್ರದೇಶಕ್ಕೆ, 1/4ರಷ್ಟು ತೆಲಂಗಾಣಕ್ಕೆ, 1/4 ರಷ್ಟು ಛತ್ತೀಸಘಡಕ್ಕೆ. ಅವರಿಗೆ ವಿಧಾನಸೌಧ, ಜನರಿಗೆ ಲಾಲಬಾಗ್! ಐಟಿ ದಾಳಿ ವೇಳೆ ದೊರೆತಿದ್ದ ಕಾಂಗ್ರೆಸ್ ನಾಯಕಿಯ ಪತಿಯ ಹಣ ಗುತ್ತಿಗೆದಾರರಿಂದ ಪಡೆದ ಕಮಿಷನ್. ಯಾರ ಪರವಾಗಿ ಕಮಿಷನ್ ಪಡೆಯಲಾಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಎಷ್ಟು ಪರ್ಸೆಂಟೇಜ್ ಫಿಕ್ಸ್?

ಈ ಐಟಿ ರೇಡ್ ನಲ್ಲಿ ಕಾಂಗ್ರೆಸ್ ಏಜಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ  ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ! 650 ಕೋಟಿ ರೂಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಕೆಂಪಣ್ಣ ಕಂಪನಿಗೆ ಮಾಹಿತಿ ಇಲ್ಲವೇ?

ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು? ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ? ಕುಮಾರಕೃಪಾ ಗೋಡೆಗಳನ್ನು ಕೇಳಿದರು ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು? ಕೆಂಪಣ್ಣ ಆಂಡ್ ಕಂಪನಿಗೆ ಈ ಮಾಹಿತಿ ಇಲ್ಲವಾ? ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version