Site icon PowerTV

ಕಾರಿನ ಗಾಜು ಒಡೆದು ಚಿನ್ನಾಭರಣ ದರೋಡೆ!

ಕಲಬುರಗಿ: ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಶುಕ್ರವಾರ ಸಂಜೆ ನಡೆದಿದೆ.

ನಗರದ GDA ಲೇಔಟ್‌ನ ಶಿವಕುಮಾರ್ ಎಂಬುವರು ಮಣಪುರಂನಲ್ಲಿಟ್ಟಿದ್ದ ಚಿನ್ನಾಭರಣ ಇಟ್ಟಿದ್ದರು. ಶಿವಕುಮಾರ್ ಚಿನ್ನಾಭರಣ ತೆಗೆದುಕೊಂಡು ಕಾರ್ ಹಿಂಬದಿ ಸಿಟ್‌‌ನಲ್ಲಿ ಬ್ಯಾಗ್ ಇಟ್ಟು ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಕಾರಿನ ಹಿಂಬದಿ ಡೋರ್‌ನ ಗಾಜು ಒಡೆದು ಚಿನ್ನಾಭರಣ, ಬ್ಯಾಗ್ ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ:ರಾಜ್ಯದ ಕೆಲ ಜಿಲ್ಲೆಯಲ್ಲಿ ಮಳೆ ಸಾಧ್ಯತೆ!

ಬ್ಯಾಗ್​ನಲ್ಲಿ 50 ಗ್ರಾಂ ಮಾಂಗಲ್ಯ ಸರ, 50 ಗ್ರಾಂ ಬಳೆಗಳು, 10 ಗ್ರಾಂನ ಉಂಗುರ ಸೇರಿದಂತೆ 4.60 ಲಕ್ಷ ರೂ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version