Site icon PowerTV

ರಸ್ತೆಯಲ್ಲೇ ಕಾಡೆಮ್ಮೆಗಳ ಹಿಂಡು!: ವಾಹನ ಸವಾರರು ಪರದಾಟ

ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಹಂದಿಮುಲ್ಲಾ ಕ್ರಾಸ್ ಬಳಿ ಕಾಡೆಮ್ಮೆ ಹಿಂಡು ರಸ್ತೆಯಲ್ಲಿ ನಿಂತು ವಾಹನ ಸವಾರರು ಪರದಾಡಿದರು.

ಕಾಡೆಮ್ಮೆ ಹಿಂಡನ್ನ ರಸ್ತೆಯಲ್ಲಿ ಕಂಡ ವಾಹನ ಸವಾರರು ಆತಂಕದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿಂತಲ್ಲಿಯೇ ನಿಂತಿದ್ದರು. ರಸ್ತೆ ಮೇಲೆ ರಾಜಾರೋಷವಾಗಿ ನಿಂತಿದ್ದ ಕಾಡಾನೆಗಳ ಹಿಂಡನ್ನ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: Viral Video : ಟ್ರಾಫಿಕ್ ಪೊಲೀಸ್​ಗೆ ಚಪ್ಪಲಿಯಿಂದ ಹೊಡೆದ ಲೇಡಿ

ಹಂದಿಮುಲ್ಲಾ, ಹಡಿನಬಾಳ, ಗುಂಡಬಾಳ ಗ್ರಾಮದ ರಸ್ತೆಗಳಲ್ಲಿ ಕಾಡೆಮ್ಮೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಬೇರೆಡೆ ಸ್ಥಳಾಂತರಿಸುವಂತೆ ಜನರು ಒತ್ತಾಯ ಮಾಡಿದ್ದಾರೆ.

Exit mobile version