Site icon PowerTV

ಸಿಎಂ ಕ್ಷೇತ್ರದ ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ : ವಿದ್ಯುತ್​ ಸ್ಥಗಿತ

ಮೈಸೂರು: ವಿದ್ಯುತ್​ ಬಾಕಿ ಮೊತ್ತ ಪಾವತಿ ಮಾಡದ ಹಿನ್ನೆಲೆ ಮೈಸೂರಿನ ನರಸೀಪುರ ಪಟ್ಟಣದಲ್ಲಿರುವ ಮಿನಿ ವಿಧಾಸೌಧಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗಿದೆ.

ಚೆಸ್ಕಾಂ ಇಲಾಖೆಗೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ 2,45,000 ಬಾಕಿ ಮೊತ್ತವನ್ನು ಕಟ್ಟುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಪಾವತಿಸದ ಹಿನ್ನೆಲೆ ಚೆಸ್ಕಾಂ ಇಲಾಖೆ ಸಿಬ್ಬಂದಿ ಪಟ್ಟಣದ ತಾಲೂಕು ಕಚೇರಿಗೆ ವಿದ್ಯೂತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿ: ಹಳೆಯ ನೆನಪು ಮೆಲುಕು ಹಾಕಿದ ಡಿಸಿಎಂ ಡಿ.ಕೆ ಶಿವಕುಮಾರ್​

ಮುಖ್ಯಮಂತ್ರಿ ಸಿದ್ದರಾಮ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನರಸೀಪುರ ಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿಯೇ ವಿದ್ಯುತ್​ ಬಿಲ್​ ಪಾವತಿ ಮಾಡಿದ ಹಿನ್ನೆಲೆ ಮಿನಿ ವಿಧಾನಸೌಧದ ಇಲಾಖೆಗಳು ಕೆಲ ಕಾಲ ತಮ್ಮ ಕೆಲಸಗಳನ್ನು ಸ್ಥಗತಗೊಳಿಸಿದ್ದರು.

Exit mobile version