Site icon PowerTV

ಬೆಳ್ಳಂಬೆಳಗ್ಗೆ ಬೆಂಗಳೂರಿನ 15 ಕಡೆಗಳಲ್ಲಿ ಐಟಿ ದಾಳಿ!

ಬೆಂಗಳೂರು : ಬೆಂಗಳೂರಿನ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಕರ ಮನೆ ಬಾಗಿಲುಗಳನ್ನು ತಟ್ಟಿದ್ದಾರೆ.

ಚಿನ್ನದ ವ್ಯಾಪಾರಿಗಳನ್ನು ಟಾರ್ಗೆಟ್​ ಮಾಡಿ ಕಳೆದವಾರ ದಾಳಿ ಮಾಡಿದ್ದ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ನಗರದ ಮತ್ತಿಕೆರೆ, ಮಲ್ಲೇಶ್ವರ, ಡಾಲರ್ಸ್​ ಕಾಲೊನಿ, ಸರ್ಜಾಪುರ, ಸೇರಿ ಸುಮಾರು 15 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ನಗರದ ಉದ್ಯಮಿಗಳು, ಜ್ಯೂವೆಲ್ಲರಿ ಶಾಪ್​ ಮಾಲೀಕರು, ಸೇರಿದಂತೆ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಾದ್ಯಂತ ಮುಂದಿನ 48 ಗಂಟೆಗಳ ಕಾಲ ಜೋರು ಮಳೆ!

ಇತ್ತೀಚೆಗೆ ನಗರದ ಹಲವು ಕಡೆಗಳಲ್ಲಿ ಚಿನ್ನದ ವ್ಯಾಪಾರಿಗಳು ಸೇರಿದಂತೆ ಹಲವರು ಕಳೆದ ಹಲವು ವರ್ಷಗಳಿಂದ ತೆರಿಗೆ ವಂಚನೆ ಮಾಡಿರುವ ದೂರುಗಳು ಕೇಳಿ ಬಂದ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಕರ ಮನೆಗಳು ಸೇರಿ ಕಚೇರಿ, ಆಪ್ತರ ಮನೆಗಳ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Exit mobile version