Site icon PowerTV

‘ಅನಿಮಲ್​’ ಲವ್​ ಟ್ರ್ಯಾಕ್ ಬಿಡುಗಡೆ: ಬೋಲ್ಡ್​ ಆ್ಯಕ್ಟಿಂಗ್​​ನಲ್ಲಿ ರಶ್ಮಿಕ ಮಿಂಚಿಂಗ್​!

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ ಎಂಬುದಕ್ಕೆ ಈ ಹಾಡು ಸಾಕ್ಷಿ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಕನ್ನಡದ ನಂತರ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಬಾಲಿವುಡ್‌ನಲ್ಲಿ ಕೂಡಾ ಬೇಡಿಕೆ ನಟಿಯಾಗಿ ಹೆಸರು ಮಾಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ರಣಬೀರ್‌ ಕಪೂರ್‌ ಜೊತೆ ‘ಅನಿಮಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಲಾಂ..! ರೈಲಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಿಸಿದ ಯೋಧ

‘ಅನಿಮಲ್‌’ ಚಿತ್ರತಂಡ ಇತ್ತೀಚೆಗೆ ರಶ್ಮಿಕಾ ಫಸ್ಟ್‌ಲುಕ್‌ ಬಿಡುಗಡೆ ಮಾಡಿತ್ತು. ಸೀರೆ, ಮಾಂಗಲ್ಯ, ಕುಂಕುಮ ಹಾಕಿ ಗೃಹಿಣಿ ಲುಕ್‌ನಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದರು. ರಶ್ಮಿಕಾ-ರಣಬೀರ್ ಲಿಪ್ ಲಾಕ್​ ಪೋಸ್ಟರ್ ನೋಡಿದ ಫ್ಯಾನ್ಸ್​ ಈ ಹಾಡಿನ ಬಿಡುಗಡೆಗಾಗಿ ಕಾದಿದ್ದರು.

ಇದೀಗ​ ಲವ್​ ಟ್ರ್ಯಾಕ್ ಬಿಡುಗಡೆಯಾಗಿದೆ. ಜೊತೆಗೆ ಇವರಿಬ್ಬರ ಮದುವೆ ಕೂಡ ನಡೆಯುವುದನ್ನು ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ ನೋಡಬಹುದು.

Exit mobile version