Site icon PowerTV

ದಸರಾ ರಜೆಗೆಂದು ಅಜ್ಜಿ ಮನೆಗೆ ಬಂದು ಮಸಣ ಸೇರಿದ ಬಾಲಕ

ರಾಮನಗರ : ದಸರಾ ರಜೆ ಅಂದ್ರೆ ಮಕ್ಕಳಿಗೆ ತುಸು ಹೆಚ್ಚು ಖುಷಿ. ಈ ಬಾರಿ ಅಕ್ಟೋಬರ್ 8 ರಿಂದ 24 ರವರೆಗೆ ದಸರಾ ರಜೆ, ಏಪ್ರಿಲ್ 11 ರಿಂದ ಮೇ 28 ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಇರಲಿದೆ.

ದಸರಾ ರಜೆಗೆಂದು ಸಂತೋಷದಿಂದಲೇ ಅಜ್ಜಿ ಮನೆಗೆ ಬಂದಿದ್ದ ಬಾಲಕನೋರ್ವ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಈಜಲು ಹೋಗಿ ಬಾಲಕ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಹಲಸೂರು ಗ್ರಾಮದ ಚೆನ್ನೇಗೌಡನ ಕೆರೆಯಲ್ಲಿ ನಡೆದಿದೆ.

ದರ್ಶನ್ (12) ಮೃತ ದುರ್ದೈವಿ. ದರ್ಶನ ಹಲಸೂರಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಮೂಲತಃ ಮಳವಳ್ಳಿಯವನಾಗಿದ್ದ ದರ್ಶನ್ ಅಜ್ಜಿ ಮನೆಯಲ್ಲಿ ವಾಸವಿದ್ದ. ಕೆರೆಯಲ್ಲಿ ಈಜಲು ಹೋಗಿದ್ದು, ಈ ವೇಳೆ ನೀರಿನಿಂದ ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಮುಗಿಲು ಮುಟ್ಟಿದ ಆಕ್ರಂದನ

ದರ್ಶನ ಕಾಣದೆ ಇದ್ದಾಗ ಕುಟುಂಬಸ್ಥರು ಹುಡುಕಾಡಿದಾಗ ಕೆರೆ ಬಳಿ ಆತನ ಬಟ್ಟೆ, ಚಪ್ಪಲಿ ಇರುವುದು ಕಂಡಿದೆ. ಕೂಡಲೇ ಸ್ಥಳೀಯರು ತೆಪ್ಪಾದ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಕೆರೆಯಲ್ಲಿದ್ದ ಮೃತದೇಹವನ್ನು ಹೊರೆ ಎಳೆದುಕೊಂಡು ಬಂದಿದ್ದಾರೆ. ಮೃತ ದರ್ಶನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version