Site icon PowerTV

ಸ್ಕೈ ಡೈವಿಂಗ್ ಮಾಡಿ ವಿಶ್ವ ದಾಖಲೆ ಬರೆದಿದ್ದ 104ರ ಅಜ್ಜಿ ಇನ್ನಿಲ್ಲ

ಬೆಂಗಳೂರು : ವಿಶ್ವದ ಅಂತ್ಯಂತ ಹಿರಿಯ ಸ್ಕೈ ಡೈವರ್​ ಎಂದು ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದ ಡೊರೊಥಿ ಹಾಫ್ನರ್​ ಎಂಬ ವೃದ್ಧೆ ತನ್ನ ಬಯಕೆಯನ್ನು ಈಡೇರಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ.

ಇತ್ತೀಚೆಗಷ್ಟೇ ಡೊರೊಥಿ ಅವರು ಸ್ಕೈ ಡೈವ್​ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. 104ರ ಇಳಿ ವಯಸ್ಸಿನಲ್ಲಿ ಸ್ಕೈ ಡೈವ್​ ಮಾಡುವುದು ಸುಲಭದ ಮಾತಲ್ಲ, ಇದಕ್ಕಾಗಿ ಡಬಲ್​ ಗುಂಡಿಗೆ ಬೇಕು. ಡೊರೊಥಿ ಆ ಧೈರ್ಯವನ್ನು ಪ್ರದರ್ಶಿಸಿ, ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದಾರೆ.

ಈ ಹಿಂದೆ ಈ ದಾಖಲೆ ಸ್ವೀಡನ್​ ಮೂಲದ 103 ವಯಸ್ಸಿನ ಮಹಿಳೆಯ ಹೆಸರಿನಲ್ಲಿತ್ತು. ಇದನ್ನು ಡೊರೊಥಿ ಅವರು ಇತ್ತೀಚೆಗಷ್ಟೇ ಮುರಿದಿದ್ರು. ಆದರೆ, ಸೋಮವಾರ ಬೆಳಗ್ಗೆ ಬ್ರೂಕ್‌ಡೇಲ್ ಲೇಕ್ ವ್ಯೂ ಸೀನಿಯರ್ ಲಿವಿಂಗ್ ಕಮ್ಯುನಿಟಿ ಕಟ್ಟಡದಲ್ಲಿ ನಿಧನ ಹೊಂದಿದ್ದಾರೆ ಎಂದು ಡೊರೊಥಿ ಅವರ ಆಪ್ತ ಸ್ನೇಹಿತ ಜೋ ಕಾನಂಟ್ ತಿಳಿಸಿದ್ದಾರೆ. ಭಾನುವಾರ ರಾತ್ರಿ ನಿದ್ರೆಯಲ್ಲಿ ಇರುವಾಗಲೇ ಡೊರೊಥಿ ಮೃತಪಟ್ಟಿದ್ದಾರೆಂದು ಕಾನಂಟ್ ತಿಳಿಸಿದ್ದಾರೆ.

Exit mobile version